Home » ಮಣಿಪಾಲ: ವಿಜಯನಗರ ಕೋಡಿಯ ನಿವಾಸಿ ನಾಪತ್ತೆ
ಮಣಿಪಾಲ: ಹೆರ್ಗಾ ಗ್ರಾಮದ ಸರಳೇಬೆಟ್ಟು ವಿಜಯನಗರ ಕೋಡಿಯ ನಿವಾಸಿ ಅನಂತ ನಾಯ್ಕ್ (49) ಎಂಬುವವರು ಅಕ್ಟೋಬರ್ 30ರಿಂದ ಕಾಣೆಯಾಗಿದ್ದಾರೆ.
ಅಂದು ಮನೆಯಿಂದ ಈಶ್ವರನಗರ ಕಡೆಗೆ ಹೋದವರು ಈವರೆಗೆ ಮನೆಗೆ ಬರಲಿಲ್ಲ. ಈ ಬಗ್ಗೆ ಪತ್ನಿ ಲಲಿತಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.