ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅರಣ್ಯ ಇಲಾಖೆ: ಮ್ಯಾಂಗ್ರೋವ್ ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಮೇ 31: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಕುಂದಾಪುರ ಇವರ ನೇತೃತ್ವದಲ್ಲಿ  ಮೇ 27 ರಂದು ಕುಂದಾಪುರದ ಮೂವತ್ತು ಮೂಡಿ  ಎಂಬ ಸಮುದ್ರ ಮತ್ತು ನದಿ ಸೇರುವ ಸ್ಥಳದಲ್ಲಿ 3000 ಮ್ಯಾಂಗ್ರೋವ್ ಗಿಡವನ್ನು ಸ್ಕೌಟ್ಸ್-ಗೈಡ್ಸ್, ರೋವರ್-ರೇಂಜರ್ ಸಹಕಾರದಿಂದ ಗಿಡ ನೆಡುವ ಮೂಲಕ ಪ್ರಕೃತಿ ರಕ್ಷಣೆಯನ್ನು ಸ್ಕೌಟ್ಸ್ ಗೈಡ್ಸ್‍ಗಳು ಯಾವ ರೀತಿ ಮಾಡಬಹುದು ಎಂಬುದನ್ನು ಸಮಾಜಕ್ಕೆ ನೀದರ್ಶನ ನೀಡುವ ಒಂದು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಲ್ಲಿನ ಅರಣ್ಯಧಿಕಾರಿಗಳು ಮ್ಯಾಂಗ್ರೋವ್ ಗಿಡದ ಬಗ್ಗೆ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಕುಂದಾಪುರ ಅರಣ್ಯಧಿಕಾರಿಗಳು, ಸಿಂಬ್ಬಂದಿ ವರ್ಗ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ 50 ಸ್ಕೌಟ್ಸ್/ ಗೈಡ್ಸ್ ಹಾಗೂ ರೋವರ್ಸ್/ ರೇಂಜರ್ಸ್, ಜಿಲ್ಲಾ ಉಪಾಧ್ಯಕ್ಷೆ ಗುಣರತ್ನಾ, ಜಿಲ್ಲಾ ಸ್ಥಾನೀಯ ಆಯುಕ್ತ ಕೊಗ್ಗ ಗಾಣಿಗ, ಜಿಲ್ಲಾ ತರಬೇತಿ ಆಯುಕ್ತ ಆನಂದ್ ಆಡಿಗ ಭಾಗವಹಿಸಿದ್ದರು.

ಜಿಲ್ಲಾ ಸಂಘಟಕರಾದ ಸುಮನ್ ಶೇಖರ್ ಹಾಗೂ ನಿತೀನ್ ಅಮೀನ್ ಕಾರ್ಯಕ್ರಮವನ್ನು ಸಂಘಟಿಸಿದರು.