ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ೨೦೧೭-೧೮ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-೧ (೫೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು)ರಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಗಳಿಸಿದೆ.
ವಿ.ವಿ.ಯಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಕೆ. ಪ್ರಶಸ್ತಿಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮತ್ತು ನಿರ್ವಾಹಕ ಸಂಪಾದಕ ಚೇತನ್ ಶೆಟ್ಟಿ ಕೋವಾಡಿಯವರಿಗೆ ಹಸ್ತಾಂತರಿಸಿದರು.
ಈ ವೇಳೆಯಲ್ಲಿ ಉಪನ್ಯಾಸ ಸಂಪಾದಕರಾದ ಸ್ಪೂರ್ತಿ ಎಸ್. ಫೆರ್ನಾಂಡಿಸ್, ಪ್ರವೀಣ್ ಮೊಗವೀರ ಗಂಗೊಳ್ಳಿ, ಡಾ. ದೀಪಾ, ರೇಷ್ಮಾ ಶೆಟ್ಟಿ, ರಕ್ಷಿತ್ ರಾವ್ ಗುಜ್ಜಾಡಿ, ನೂತನ್ ಎಸ್. ಉಪಸ್ಥಿತರಿದ್ದರು.
ಮಂಗಳೂರು ವಿ.ವಿ.ಯ ಕುಲಸಚಿವ ಪ್ರೊ. ಎ. ಎಮ್. ಖಾನ್, ಪರೀಕ್ಷಾಂಗ ಕುಲಸಚಿವ ಡಾ. ವಿ. ರವೀಂದ್ರಾಚಾರಿ, ಹಣಕಾಸು ಅಧಿಕಾರಿ ಡಾ. ದಯಾನಂದ ನಾಯ್ಕ್ ಇದ್ದರು.