ಮಂಗಳೂರು: ಮಂಗಳೂರಿನ ನಂತೂರ ಜಂಕ್ಷನ್‌ನಲ್ಲಿ ಓಡುತ್ತಿದ್ದ ಹುಂಡೈ ಕಾರೊಂದಕ್ಕೆ ಅಚಾನಕ್ ಬೆಂಕಿ ಹೊತ್ತಿಕೊಂಡ ಘಟನೆ ಇಂದು ನಡೆದಿದೆ. ಕಾರಿನಲ್ಲಿ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ತಕ್ಷಣವೇ ಹೊರಗಡೆ ಬಂದ ಕಾರಣ ಅನಾಹುತ ತಪ್ಪಿದೆ.
ಬೆಂಕಿ ವ್ಯಾಪಿಸುತ್ತಿದ್ದಾಗ ಸ್ಥಳೀಯರು ಕಾಲಮೀರಿ ರಕ್ಷಣೆಗೆ ಧಾವಿಸಿ, ನೀರಿನ ಟ್ಯಾಂಕರ್ ಅನ್ನು ಕರೆಸಿ ಬೆಂಕಿ ನಂದಿಸಲು ಮುಂದಾದರು. ಅವರ ಸಮಯ ಪ್ರಜ್ಞೆ ಮತ್ತು ತಕ್ಷಣದ ಕ್ರಮದಿಂದ ದೊಡ್ಡ ದುರಂತವೇ ತಪ್ಪಿದಂತಾಗಿದೆ.
ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















