ಮಂಗಳೂರು, ಜೂ.26: ಮಂಗಳೂರು ಹಾಗೂ ಉಡುಪಿಯ ಚಿನ್ನದ ಮಳಿಗೆಗಳ ಮೇಲೆ ಗುರುವಾರ ಐಟಿ ದಾಳಿ ನಡೆದಿದೆ.
ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿರುವ ಮಳಿಗೆಗಳಿಗೆ ದಾಳಿ ನಡೆದಿದ್ದು, ಹಲವು ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ.
ಸುಲ್ತಾನ್ ಗೋಲ್ಡ್ ಕೇರಳದ ರವೂಫ್ ಎಂಬುವವರಿಗೆ ಸೇರಿದ ಚಿನ್ನದ ಮಳಿಗೆ ಎಂದು ತಿಳಿದು ಬಂದಿದೆ.