ಮಂಗಳೂರು: ಮಂಗಳವಾರ ಬೆಳಿಗ್ಗೆ ಮಂಗಳೂರಿನ ನಗರಭಾಗದಲ್ಲಿ ಕಂಡುಬಂದಿದ್ದ ಕಾಡುಕೋಣ ಸಾವನ್ನಪ್ಪಿದೆ. ಕಾಡುಕೋಣವನ್ನು ಹಿಡಿಯಲು ಹಾಕಿರುವ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ಸಾವನ್ನಪ್ಪಿದೆ.
ಮಂಗಳೂರು ನಗರದೊಳಗೆ ಇಂದು ಬೆಳಗ್ಗೆ ಆ ಕಾಡುಕೋಣ ಆಗಮಿಸಿತ್ತು. ಅನಂತರ 2 ಗಂಟೆ ಕಾರ್ಯಾಚರಣೆ ಮಾಡಿ ಕಾಡುಕೋಣ ಅರಣ್ಯ ಇಲಾಖೆ ಸಿಬಂದಿ ಸೆರೆಹಿಡಿದಿದ್ದರು. ಈ ವೇಳೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ದಾರುಣ ಸಾವನ್ನಪಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಗೆ ಅನ್ಯಾಯವಾಗಿ ಈ ಕಾಡುಕೋಣ ಪ್ರಾಣತೆತ್ತಿದ್ದು, ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಮುಗ್ದ ಕಾಡುಪ್ರಾಣಿಯನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸೋಕೂ ಇಲಾಖೆಗೆ ಆಗಿಲ್ಲದಿರುವುದು ದುರಂತ ಎಂದು ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡುಕೋಣ ಕಂಡುಬಂದರೆ ಮಾಹಿತಿ ನೀಡಿ:
ನಗರದಲ್ಲಿ ಇನ್ನೂ ಎರಡು ಕಾಡುಕೋಣಗಳು ಇದೆ ಎನ್ನಲಾಗಿದ್ದು, ಕಾಡುಕೋಣಗಳು ಕಂಡುಬಂದರೆ ತತ್ ಕ್ಷಣ ಇಲಾಖೆಗೆ ಮಾಹಿತಿ ನೀಡಿ. ಯಾವುದೇ ಕಾರಣಕ್ಕೂ ಮುಗ್ದ ಕಾಡುಕೋಣಕ್ಕೆ ತೊಂದರೆ ಕೊಡಲು ಹೋಗಬೇಡಿ.ಕಾಡಿನಿಂದ ನಾಡಿಗೆ ಬಂದ ಕಾಡುಕೋಣವನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪರಿಸರ ಹೋರಾಟಗಾರರಾದ ಶಶಿಧರ್ ಶೆಟ್ಟಿ ಸ್ಥಳೀಯರಿಗೆ ಮನವಿ ಮಾಡಿದ್ದಾರೆ