ಮಂಗಳೂರು: 2022ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 2 ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮೊದಲ 50 ರ‍್ಯಾಂಕ್‌ನಲ್ಲಿ 20 ರ‍್ಯಾಂಕ್ ಹಾಗೂ ಮೊದಲ 100 ರ‍್ಯಾಂಕ್‌ನಲ್ಲಿ 49 ರ‍್ಯಾಂಕ್‌ಗಳನ್ನು ಎಕ್ಸ್ಪರ್ಟ್ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಮೊದಲ 150 ರಲ್ಲಿ 78 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 105, ಮೊದಲ 300 ರ‍್ಯಾಂಕ್‌ಗಳಲ್ಲಿ 153 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಾಲೇಜಿನ ಆದಿತ್ಯಾ ಕಾಮತ್ ಅಮ್ಮೆಂಬಳ ಬಿಎನ್‌ವೈಎಸ್‌ನಲ್ಲಿ 7, ಪಶು ವೈದ್ಯಕೀಯದಲ್ಲಿ 17, ಬಿ ಫಾರ್ಮದಲ್ಲಿ 34ನೇ ರ‍್ಯಾಂಕ್ ಪಡೆದುಕೊಂಡರೆ, ಪ್ರಣವ್ ಎಸ್. ಬಿಎನ್‌ವೈಎಸ್‌ನಲ್ಲಿ 10, ಪಶುವೈದ್ಯಕೀಯದಲ್ಲಿ 14, ಬಿ ಫಾರ್ಮಾದಲ್ಲಿ 18, ಕೃಷಿಯಲ್ಲಿ 60ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಾದ ಮುಹಮ್ಮದ್ ರುಮೈಜ್ ಎಂಜಿನಿಯರಿಂಗ್‌ನಲ್ಲಿ 22, ಅಮರೆ ಗೌಡ ಪಶುವೈದ್ಯಕೀಯದಲ್ಲಿ 23, ಬಿ. ಫಾರ್ಮಾದಲ್ಲಿ 31, ಬಿಎನ್‌ವೈಎಸ್‌ನಲ್ಲಿ 53, ಕೃಷಿಯಲ್ಲಿ 61, ವೃಷಭ್ ವಿ.ಜವಳಿ ಪಶುವೈದ್ಯಕೀಯ 26, ಬಿಫಾರ್ಮಾದಲ್ಲಿ 36, ಬಿಎನ್‌ವೈಎಸ್‌ನಲ್ಲಿ 49, ಅನುಜ್ಞಾ ಕೆ. ಬಿಎನ್‌ವೈಎಸ್‌ನಲ್ಲಿ 29, ಕೃಷಿಯಲ್ಲಿ 59, ಪಶುವೈದ್ಯಕೀಯ 62, ಬಿ ಫಾರ್ಮಾ 95,ಸ್ಕಂದ ಶಾನಭಾಗ್ ಪಶುವೈದ್ಯಕೀಯದಲ್ಲಿ 29, ಬಿ ಫಾರ್ಮಾದಲ್ಲಿ 35, ಕೃಷಿಯಲ್ಲಿ 97,ಪವನ್ ಎಸ್. ಧೂಳಶೆಟ್ಟಿ ಕೃಷಿಯಲ್ಲಿ 30, ಬಿಎನ್‌ವೈಎಸ್‌ನಲ್ಲಿ 68, ಪಶುವೈದ್ಯಕೀಯದಲ್ಲಿ 91, ವಿಶಾಲ್ ಎಸ್. ಕೃಷಿಯಲ್ಲಿ 39, ಸಾಥ್ವಿಕ್ ಎ.ಎಸ್. ಕೃಷಿಯಲ್ಲಿ 40, ಪಶುವೈದ್ಯಕೀಯದಲ್ಲಿ 50, ಬಿಎನ್‌ವೈಎಸ್‌ನಲ್ಲಿ 52, ಬಿ ಫಾರ್ಮಾದಲ್ಲಿ 59, ಸ್ನೇಹಲ್ ಮಹಿಮ ಕ್ಯಾಸ್ಟಲಿನೊ ಕೃಷಿಯಲ್ಲಿ 44, ಬಿಎನ್‌ವೈಎಸ್‌ನಲ್ಲಿ 85, ಶ್ರೀಸಂಪತ್ ಎಸ್.ಡಿ. ಪಶುವೈದ್ಯಕೀಯದಲ್ಲಿ 49, ಬಿಎನ್‌ವೈಎಸ್‌ನಲ್ಲಿ 51, ಬಿ ಫಾರ್ಮಾದಲ್ಲಿ 60, ಅಭಿಷೇಕ್ ಬಿ. ವೈ. ಕೃಷಿಯಲ್ಲಿ 52, ತುಬಾಚಿ ಕೃತಿಕ್ ಚನ್‌ಗೌಡ ಬಿಎನ್‌ವೈಎಸ್‌ನಲ್ಲಿ 57, ಪಶುವೈದ್ಯಕೀಯದಲ್ಲಿ 73, ಸಮರ್ಥ್ ಎಸ್. ಬೆಟಗೇರಿ ಬಿಎನ್‌ವೈಎಸ್‌ನಲ್ಲಿ 59, ಪಶುವೈದ್ಯಕೀಯದಲ್ಲಿ 65, ಬಿ ಫಾರ್ಮಾದಲ್ಲಿ 81, ನಮಿತಾ ಎನ್. ಬಿಎನ್‌ವೈಎಸ್‌ನಲ್ಲಿ 71, ಹಿಮಾಂಶು ಎಲ್. ಕೃಷಿಯಲ್ಲಿ 72, ಸೂರ್ಯದೀಪ್ ಎಸ್. ಕೃಷಿಯಲ್ಲಿ 82, ಬಿಎನ್‌ವೈಎಸ್‌ನಲ್ಲಿ 93,ಭರತ್ ಕುಮಾರ್ ವೈ ರೇವಡಕುಂಡಿ ಕೃಷಿಯಲ್ಲಿ 84, ಯಶಸ್ವಿನಿ ಎಸ್. ಬಾಳಪ್ಪನವರ್ ಬಿಎನ್‌ವೈಎಸ್‌ನಲ್ಲಿ 87, ಪಶುವೈದ್ಯಕೀಯದಲ್ಲಿ 92, ಅಭಿ ಎಸ್. ಕುಮಾರ್ ಕೃಷಿಯಲ್ಲಿ 90, ದಿಶಾಂತ್ ಕೆ.ಪಶುವೈದ್ಯಕೀಯದಲ್ಲಿ 98 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಐದು ವಿಭಾಗದ ಮೊದಲ 100 ರ‍್ಯಾಂಕ್‌ಗಳಲ್ಲಿ 49 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. `ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆಯ ಫಲಿತಾಂಶದ ಬಗ್ಗೆ ನಿರೀಕ್ಷೆ ಇತ್ತು. ತಾನು ಈಗಾಗಲೇ ಕೆವಿಪಿವೈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ನೀಟ್ ಪರೀಕ್ಷೆಯಲ್ಲಿ ಫಲಿತಾಂಶದ ಆಧಾರದಲ್ಲಿ ಮುಂದಿನ ಶಿಕ್ಷಣದ ಕುರಿತು ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ತನ್ನ ಶೈಕ್ಷಣಿಕ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹದೊಂದಿಗೆ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಮತ್ತು ಅಧ್ಯಾಪಕರ ಕೊಡುಗೆ ಅಪಾರವಾಗಿದೆ. ಶೈಕ್ಷಣಿಕವಾಗಿ ಸಿದ್ಧಪಡಿಸುವುದರೊಂದಿಗೆ ತನ್ನನ್ನು ಮಾನಸಿಕವಾಗಿಯೂ ಬಲಪಡಿಸಿದ್ದಾರೆ. ನಿಜಕ್ಕೂ ಇದಕ್ಕಾಗಿ ನಾನು ಎಕ್ಸ್ಪರ್ಟ್ ನ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಬಿಎನ್‌ವೈಎಸ್‌ನಲ್ಲಿ ೭ನೇ ರ‍್ಯಾಂಕ್ ಪಡೆದ ಆದಿತ್ಯಾ ಕಾಮತ್ ಅಮ್ಮೆಂಬಳ.