ಸೆ. 20-21: ಮಂಗಳೂರು ವಿ. ವಿ.ಮಟ್ಟದ ಚೆಸ್ ಚಾಂಪಿಯನ್‌ಶಿಪ್

ಉಡುಪಿ: ಮಂಗಳೂರು ವಿ. ವಿ.ಮಟ್ಟದ ಪುರುಷ ಹಾಗೂ ಮಹಿಳಾ ಚೆಸ್ ಚಾಂಪಿಯನ್‌ಶಿಪ್ 2019-20 ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸೆಪ್ಟೆಂಬರ್ 20-21 ರಂದು ನಡೆಯಲಿದೆ.
ಸೆ.20ರಂದು ಬೆಳಿಗ್ಗೆ 9.30ಕ್ಕೆ ‌ಪಿಐಎಂನ ಪ್ರಜ್ಞಾ ಹಾಲಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ  ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ, ಆಶೀರ್ವಚಿಸಲಿದ್ದಾರೆ.
ಪಿಐಎಂ ನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಉಡುಪಿ ಹಾಗೂ ಮಂಗಳೂರು ಮೀನುಗಾರಿಕಾ ಫೆಡರೇಶನ್ನಿನ ಅಧ್ಯಕ್ಷ  ಯಶಪಾಲ್ ಸುವರ್ಣ, ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್‌ಕುಮಾರ್ ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
21ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚಿಸಲಿದ್ದು, ಮಂಗಳೂರು ವಿ. ವಿ. ಯ ಉಪಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ  ಡಾ. ಕಿಶೋರ್‌ಕುಮಾರ್, ಡಾ. ಎಂ. ಆರ್ ಹೆಗಡೆ, ಡಾ. ಜಿ. ಎಸ್. ಚಂದ್ರಶೇಖರ್ ಭಾಗವಹಿಸಲಿದ್ದು, ಪ್ರದೀಪ್‌ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜೇತ ಪುರುಷ ತಂಡಕ್ಕೆ ಗುಲಾಬಿ ಶಿವರಾಮ ನೋಂಡಾ ರೋಲಿಂಗ್ ಟ್ರೋಫಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದೆಂದು ಪಿಐಎಂ ನಿರ್ದೇಶಕ ಡಾ.ಭರತ್ ಹಾಗೂ ಕ್ರೀಡಾ ಸಂಯೋಜಕ ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.