ಮಂಗಳೂರು: ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಮಂಗಳೂರಿನ ಮೆಸ್ಕಾಂ ಕಚೇರಿ ಮುಂದೆ ಶುಕ್ರವಾರ ಸಿಪಿಎಂ ವತಿಯಿಂದ ಪ್ರತಿಭಟನೆ ನಡೆಯಿತು.
ಮಂಗಳೂರಿನ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿಪರೀತ ವಿದ್ಯುತ್ ದರ ಏರಿಕೆ, ಹೆಚ್ಚುವರಿ ಡಿಪಾಸಿಟ್, ತಪ್ಪುಲೆಕ್ಕಾಚಾರ ಮುಂತಾದ ಮೆಸ್ಕಾಂನ ಅವ್ಯವಸ್ಥೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಸಿಪಿಎಂ ಕಾರ್ಯಕರ್ತರು, ಸಾರ್ವಜನಿಕರು, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಿರಿ, ಹೆಚ್ಚುವರಿ ಡಿಪಾಸಿಟ್ ಬೇಡವೇ ಬೇಡ ಆಗ್ರಹಿಸಿ, ತಪ್ಪುಲೆಕ್ಕಾಚಾರಗಳನ್ನು ಸರಿಪಡಿಸಿರಿ ಇತ್ಯಾದಿ ಘೋಷಣೆಗಳನ್ನು ಕೂಗಿದರು.