ಏಕಕಾಲದಲ್ಲಿ ಒಂಭತ್ತು ಗುಳಿಗ ದೈವಗಳಿಗೆ ಗಗ್ಗರ ಸೇವೆ: ವೇಣೂರಿನ ಬರ್ಕಜೆಯಲ್ಲಿ ವಿಶೇಷ ಸೇವೆ

ಮಂಗಳೂರು: ತುಳುನಾಡಿನಲ್ಲಿ ದೈವರಾಧನೆಗೆ ತನ್ನದೇ ಆದ ಮಹತ್ವವಿದೆ. ಹೀಗಾಗಿ ಪ್ರತಿ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಗಳ ನೇಮೋತ್ಸವ, ಕೋಲೊತ್ಸವ ಸೇವೆಗಳು ನಡೆಯುತ್ತದೆ. ಇದೀಗ ತುಳುನಾಡಲ್ಲಿ ವಿಶೇಷ  ದೈವರಾಧನೆಯೊಂದು ನಡೆಯಿತು. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿರುವ ಬರ್ಕಜೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಏಕಕಾಲದಲ್ಲೇ 9 ಗುಳಿಗನಿಗೆ ಗಗ್ಗರ ಸೇವೆ ನಡೆಯಿತು.
ಇದೊಂದು ವಿಶೇಷ ಕಾರ್ಯಕ್ರಮವಾಗಿತ್ತು. ಬೆಳ್ತಂಗಡಿ ತಾಲೂಕಿನ ಬರ್ಕಜೆ  ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯ ಧೂತನಾಗಿ ಗುಳಿಗ ನೆಲೆಸಿರುವುದು. ಇಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ನವಧೂತನಾಗಿ ಭಕ್ತರಿಗೆ ಈ ದೈವ ದರ್ಶನ  ನೀಡಿದ್ದಾನೆ.
ಸುಮಾರು 9  ಗುಳಿಗನಿಗೆ ಗಗ್ಗರ ಸೇವೆ ಈ ವೇಳೆ ನಡೆಯ್ತು. ಗಗ್ಗರ ಸೇವೆಯ ಸಂದರ್ಭದಲ್ಲಿ ಬರೋಬ್ಬರಿ 9 ಗುಳಿಗನ ಅಬ್ಬರ ನೋಡಿ ಭಕ್ತರು ಅಚ್ಚರಿ ವ್ಯಕ್ತಪಡಿಸಿದರು. ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ತುಳುನಾಡಿನಲ್ಲೇ ಇದೇ ಮೊದಲ ಬಾರಿ ಗುಳಿಗನ ದರ್ಶನ, ಗಗ್ಗರ ಸೇವೆ ನಡೆಯಿತು.