ಮಂಗಳೂರು : ಶಕ್ತಿನಗರದ ರಾಜೀವನಗರದಲ್ಲಿ 41 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀವನಗರವು ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ. ಆ ನೆಲೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಗಮನ ಹರಿಸಲಾಗಿದೆ ಎಂದರು.
ರಸ್ತೆ, ಒಳ ಚರಂಡಿ ಮುಂತಾದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳು, ನನ್ನನ್ನು ಭೇಟಿ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಡುವಂತೆ ಮನವಿ ಸಲ್ಲಿಸಿದ್ದರು.
ಈಗಾಗಲೇ 1 ಕೋಟಿಗೂ ಅಧಿಕ ವೆಚ್ಚದ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ, ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ಅಜಯ್ ಕುಮಾರ್, ವಸಂತ್ ಜೆ ಪೂಜಾರಿ, ರಾಮಚಂದ್ರ ಚೌಟ, ಕಿಶೋರ್ ಕೊಟ್ಟಾರಿ, ಕಾಳಪ್ಪ, ರಮೇಶ್ ಎನ್, ಶಿವಪ್ರಕಾಶ್ ಶೆಣೈ, ಅವಿನಾಶ್, ಧರ್ಮಣ್ಣ, ಶಿವಾನಂದ, ಆಶಾ, ಚಂದ್ರಾವತಿ, ಚಂದ್ರಣ್ಣ, ಉಮೇಶ್, ಲೋಕೇಶ್, ರೋಹಿಣಿ, ಹರಿಶ್, ಹಂಸರಾಜ್, ಇಂದಿರಾ, ರಿತೇಶ್, ಹರೀಶ್ ರೈ, ದೇವಿ ಪ್ರಸಾದ್, ಸವಿತಾ ರೈ, ಉಮೇಶ್ ರೈ, ಶಿವರಾಮ್ ಭಂಡಾರಿ, ಅಶ್ವಿತ್ ಕೊಟ್ಟಾರಿ, ರವಿ ಕಕ್ಕೆಬೆಟ್ಟು, ಮೋಹನ್ ಶೆಟ್ಟಿ, ಮಾಕ್ಸಿ ಕಾರ್ಮಿಕ ಕಾಲೋನಿ, ಮುಖೇಶ್ ಕಾರ್ಮಿಕ ಕಾಲೋನಿ, ಮಾಜಿ ಮೇಯರ್ ಅಬ್ದುಲ್ ಲತೀಫ್ ಮುಂತಾದವರು ಉಪಸ್ಥಿತರಿದ್ದರು.