ಟಿಬೆಟಿಯನ್ ವಿದ್ಯಾರ್ಥಿಗಳೊಂದಿಗೆ ದಲೈಲಾಮ‌ ಸಂವಾದ: ಮುನ್ನೆಚ್ಚರಿಕಾ‌ ಕ್ರಮವಾಗಿ ಬಂದೋಬಸ್ತ್

ಮಂಗಳೂರು: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಆಹ್ವಾನಿತ ಟಿಬೇಟಿಯನ್ ವಿದ್ಯಾರ್ಥಿಗಳೊಂದಿಗೆ ನಗರದ ತಾಜ್ ಗೇಟ್ ವೇ ಹೋಟೆಲ್​​​​ನಲ್ಲಿ ಸಂವಾದ ನಡೆಸಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಹೋಟೆಲ್ ​​​ಗೆ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು, ಅಲ್ಲದೇ ಮಾದ್ಯಮ ಸಹಿತ ಆಹ್ವಾನ ಇಲ್ಲದ ಯಾರಿಗೂ ಕಾರ್ಯಕ್ರಮಕ್ಕೆ ಪ್ರವೇಶವಿರಲಿಲ್ಲ.
ಅನಂತರ ಪಂಪ್ ವೆಲ್ ನಲ್ಲಿರುವ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯುವ ಅಖಿಲ ಭಾರತ ಕೆಥೋಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದರು.
ಅಲ್ಲಿಯೂ ಕೂಡ ಬಂದೋಬಸ್ತ್​ ವ್ಯವಸ್ಥೆ ಮಾಡಿ, ದಲೈ ಲಾಮಾ ಅವರಿಗೆ ಝೆಡ್ ಸೆಕ್ಯೂರಿಟಿ ನೀಡಲಾಗಿತ್ತು.