ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಟ್ಯಾಕ್ಸಿ ಚಾಲಕರಿಗೆ ಇಂದು ಅವರ ಅಸೋಸಿಯೇಷನ್ ಮೂಲಕ ಶಾಸಕ ಕಾಮತ್ ಆಹಾರದ ಕಿಟ್ ಗಳನ್ನು ವಿತರಿಸಿದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ನೂರಾರು ಟ್ಯಾಕ್ಸಿ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದೆ ಮನೆಯಲ್ಲೇ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಇದರ ಪ್ರಮುಖರೂ ನಮ್ಮ ಪಕ್ಷದ ಹಿರಿಯರೂ ಆಗಿರುವ ಮೋನಪ್ಪ ಭಂಡಾರಿ ಅವರ ಮೂಲಕ ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆ ಪ್ರಕಾರ ನಮ್ಮ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದೊಂದಿಗೆ ಇಂದು ಟ್ಯಾಕ್ಸಿ ಚಾಲಕರಿಗೆ ಇಂದು ಕಿಟ್ ವಿತರಿಸಲಾಯಿತು ಎಂದು ತಿಳಿಸಿದ್ದಾರೆ.
ಮಂಗಳೂರು ನಗರ ಪ್ರದೇಶ ಸಂಪೂರ್ಣ ಸ್ಥಬ್ದವಾಗಿದೆ. ಇಂದು ಎಲ್ಲರ ಸ್ಥಿತಿಯೂ ಒಂದೇ ತೆರನಾಗಿದೆ. ಹಾಗಾಗಿ ಯಾರಿಗೆ ಆಹಾರ ಸಾಮಾಗ್ರಿಗಳ ಕಿಟ್ ಹೆಚ್ಚು ಅವಶ್ಯಕವಾಗಿದೆಯೋ ಅಂತಹವರನ್ನು ಗುರುತಿಸಿ ಕಿಟ್ ವಿತರಿಸಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ಜೆ ಸುರೇಂದ್ರ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಇದರ ಪ್ರಮುಖರು ಉಪಸ್ಥಿತರಿದ್ದರು.