ಸಂತ ಆ್ಯಗ್ನೇಸ್ ಕಾಲೇಜು; ಶತಮಾನೋತ್ಸವ ಪ್ರಯುಕ್ತ ಮ್ಯಾರಥಾನ್-ಸೈಕಲ್ ಜಾಥ

ಮಂಗಳೂರು: ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಇಂದು ಮ್ಯಾರಥಾನ್, ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಂತ ಆಗ್ನೆಸ್ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮ 2020 ಜನವರಿ 3 ರಂದು ನಡೆಯಲಿದ್ದು, ಇದರ ಪೂರ್ವವಾವಿಯಾಗಿ ನಡೆದ ಮ್ಯಾರಥಾನ್, ಕಾಲ್ನಡಿಗೆ ಹಾಗೂ ಸೈಕಲ್ ಜಾಥಾದಲ್ಲಿ ಸಾವಿರಾರು ವಿಧ್ಯಾರ್ಥಿಗಳು ಭಾಗವಹಿಸಿದರು. ಶಿಕ್ಷಕರು, ಪೋಷಕರು ಸಾಥ್ ನೀಡಿದರು.
ಕಾಲೇಜಿನಿಂದ ಆರಂಭವಾದ ಜಾಥಾ ಮಂಗಳೂರು ನಗರದ ಬೆಂದುರ್‌ವೆಲ್ ಬಲ್ಮಠ ಜ್ಯೋತಿ ವೃತ್ತದಿಂದ ಹಾದು ಆ ಮೂಲಕ ಕಾಲೇಜ್ ತಲುಪಿದೆ.
ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಅಲ್ಲದೇ ಈ ವಿಶೇಷ ಜಾಥಾ ನೋಡುವುದಕ್ಕೆ ಸಾವಿರಾರು ಪ್ರೇಕ್ಷಕರು ಆಗಮಿಸಿದ್ದರು.