ಮಂಗಳೂರು: ಸಂಸದೆ ಸಾಧ್ವೀ‌ ಪ್ರಜ್ಞಾಸಿಂಗ್ ವಿವಿಧ ಕ್ಷೇತ್ರಗಳಿಗೆ ಭೇಟಿ

ಮಂಗಳೂರು: ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮಧ್ಯಪ್ರದೇಶದ ಭೋಪಾಲ್ ನ ಸಂಸದೆ‌ ಸಾಧ್ವೀ ಪ್ರಜ್ಞಾಸಿಂಗ್ ‌ಹಿಂದೂ ಸಮಾಜೋತ್ಸವ ಮುಂದೂಡಿದ ಹಿನ್ನೆಲೆಯಲ್ಲಿ ಇಂದು
ಜಿಲ್ಲೆಯ ಪುತ್ತೂರು ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಕೊರೋನ ವೈರಸ್ ಹರಡದಂತೆ ರಾಜ್ಯಸರಕಾರ ಸಾರ್ವಜನಿಕವಾಗಿ ಯಾವುದೇ ಸಭೆ – ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ದಕ್ಷಿಣ ಕನ್ನಡದ ವಿಟ್ಲದ ಪಂಚಲಿಂಗೇಶ್ವರ ದೇವರ ರಥದ ಗದ್ದೆಯಲ್ಲಿ ಇಂದು ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಸಂಘಟಕರು ನಿನ್ನೆ ಮುಂದೂಡಿದ್ದರು.
ಆದರೆ ನಿಗದಿಯಂತೆ ನಿನ್ನೆಯೇ ಮಂಗಳೂರಿಗೆ ನಿನ್ನೆ ಆಗಮಿಸಿರುವ ಸಾಧ್ವೀ ಪ್ರಜ್ಞಾಸಿಂಗ್ ಜಿಲ್ಲೆಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.