ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 35ನೇ ಪದವು ಸೆಂಟ್ರಲ್ ವಾರ್ಡಿನ ಶಕ್ತಿನಗರ ಸಮೀಪದ ನೀತಿ ನಗರದಿಂದ ರಾಜೀವ್ ನಗರಕ್ಕೆ ತೆರಳುವ ರಸ್ತೆಗೆ 1.5 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕರು, ಇಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ನೀತಿನಗರದಿಂದ ರಾಜೀವನಗರಕ್ಕೆ ಹೋಗುವ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಇದೀಗ ಬೇಡಿಕೆ ಪೂರ್ಣಗೊಂಡಿದೆ.
ಇಲ್ಲಿನ ಒಳ ಚರಂಡಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರವೇ ಕಾಂಕ್ರೀಟ್ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಡಚಣೆಗಳಾಗಬಹುದು, ಸಾರ್ವಜನಿಕರು ಈ ವೇಳೆ ಸಹಕಾರ ನೀಡಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂಜಿನಿಯರ್ ರಮೇಶ್, ಗುತ್ತಿಗೆದಾರ ಎಂ ಹುಸ್ಸಯ್ಯನ್ ಮತ್ತು ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ. ಪೂಜಾರಿ, ಕಿಶೋರ್ ಕೊಟ್ಟಾರಿ, ರಾಮಚಂದ್ರ ಚೌಟ, ಎಚ್.ಕೆ. ಪುರುಷೋತ್ತಮ್, ರಿತೇಶ್, ಪ್ರಸಾದ್ ಶಕ್ತಿನಗರ, ವಸಂತ್ ಆಳ್ವ, ಹರೀಶ್ ರೈ, ದೇವಿ ಪ್ರಸಾದ್, ಶರಣ್, ಕುಸುಮ ಶೆಟ್ಟಿ, ಶಿವಣ್ಣ ರಾಜೀವನಗರ, ರಮೇಶ್ ರಾಜೀವನಗರ, ಕಲ್ಲಪ್ಪ ರಾಜೀವನಗರ, ಚಂದ್ರಾವತಿ, ಭಾರತಿ, ರವಿ, ಶಿವರಾಮ್ ಭಂಡಾರಿ, ಚರಣ್ ರಾಜೀವನಗರ, ಜಯರಾಮ್, ಕಿಶೋರ್ ಶಕ್ತಿನಗರ, ಚಂದ್ರಣ್ಣ ರಾಜೀವನಗರ, ತಿಮ್ಮಪ್ಪ ಶೆಟ್ಟಿ, ಶಿವಾನಂದ್, ಗಣೇಶ್ ರಾಜೀವನಗರ, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.