ಮಾನಸಿಕ‌ ಅಸ್ವಸ್ಥನಿಂದ ರಸ್ತೆಯಲ್ಲಿ ತಲ್ವಾರ್ ಹಿಡಿದು ರಂಪಾಟ

ಮಂಗಳೂರು: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಂಚತ್ತಾರಿನಲ್ಲಿ ಬುಧವಾರ ನಡೆದಿದೆ.
ಪುಂಚತ್ತಾರಿನ ನಿವಾಸಿ ಅವಿನಾಶ್ ಮಾನಸಿಕ ಅಸ್ವಸ್ಥಗೊಂಡ ಯುವಕನಾಗಿದ್ದು, ಪುಂಚತ್ತಾರು ಪೇಟೆಯ ಸುತ್ತ ತಲವಾರು ಝಳಪಿಸುತ್ತಾ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ. ಸ್ಥಳೀಯರು ಹಾಗೂ ಪೋಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪೋಲೀಸ್ ಜೀಪ್ ನ ಬಳಿಗೂ ಬಂದು ಈತ ತಲ್ವಾರ್ ಬೀಸಿದ್ದು, ಬಳಿಕ ಪೋಲೀಸರು ಹಾಗೂ ಸ್ಥಳೀಯರು ಉಪಾಯವಾಗಿ ಆತನನ್ನು ಹಿಡಿದು ಮಂಗಳೂರಿನ ಕಂಕನಾಡಿ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ದಾಖಲಿಸಿದ್ದಾರೆ‌.