ಪುತ್ತೂರು: ಹಿಂದೂ ಮುಖಂಡನ ಬರ್ಭರ ಹತ್ಯೆ; ಗಣೇಶೋತ್ಸವ ನಡೆಯುತ್ತಿದ್ದಾಗಲೇ  ದುರ್ಘಟನೆ 

ಪುತ್ತೂರು: ಪುತ್ತೂರು ತಾಲೂಕಿನ  ಗ್ರಾಮಾಂತರ ಪೊಲೀಸ್ ಠಾಣೆಯಾದ ಸಂಪ್ಯ ಪೊಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೇ ಹಿಂದೂ‌ ಮುಖಂಡನೋರ್ವನನ್ನು ಬರ್ಭರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ  ಕೊಲೆಯಾದ ದುರ್ದೈವಿ.
ಮಂಗಳವಾರ ಮಧ್ಯರಾತ್ರಿ ಅಂದಾಜು 12 ಗಂಟೆಯ ಸುಮಾರಿಗೆ  ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ. ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂದಿಸಿದ್ದು, ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಎಸ್ಪಿ ಲಕ್ಷ್ಮೀ ಪ್ರಸಾದ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.