ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ದಿನನಿತ್ಯದಲ್ಲಿ ಹಲವು ರೀತಿಯ ಪ್ರತಿಭಟನೆ ನಡೆಯುತ್ತದೆ. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಸಂಘ ಸಂಸ್ಥೆಗಳ ವತಿಯಿಂದ ಬೆಂಬಲ ಕೂಡ ಇರುತ್ತದೆ.
ಆದರೆ ಇಲ್ಲಿ ಇಬ್ಬರು ವ್ಯಕ್ತಿಗಳು ಪ್ರಮುಖ ರಸ್ತೆ ಸರಿಪಡಿಸುವಂತೆ ಸರ್ಕಲ್ನಲ್ಲಿ ಕೂತು ಯಾವುದೇ ಪ್ರಚಾರವಿಲ್ಲದೇ, ಯಾರ ಬೆಂಬಲ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆ. ಮಂಗಳೂರಿನ ನಂತೂರು ರಸ್ತೆ ದುರಸ್ತಿಗೆ ಆಗ್ರಹಿಸಿ ರೂಪನ್ ಫೆರ್ನಾಂಡೀಸ್ ಮತ್ತು ಅರ್ಜುನ್ ಮಸ್ಕರೇನಸ್ ಎಂಬುವರು ನಂತೂರು ಸರ್ಕಲ್ ವೃತ್ತದಲ್ಲಿ ನಾಗರಿಕರ ಪರವಾಗಿ ಮೌನ ಪ್ರತಿಭಟನೆ ನಡೆಸುತ್ತಿರುವವರು.
ಈ ವೃತ್ತದ ಸುತ್ತ ರಸ್ತೆ ಹದಗೆಟ್ಟಿದ್ದು, ಹಲವು ಅಪಘಾತಗಳು ಸಂಭವಿಸಿ, ಸಾವು ನೋವು ಉಂಟಾಗಿದೆ. ಆದ್ರೆ ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ, ಹೀಗಾಗಿ ಇಬ್ಬರೇ ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಇವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.