ಮಂಗಳೂರು : ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್ ವರ್ಶನ್ 3.0 ಅನ್ನು ಆರಂಭಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ವಿಶ್ವದರ್ಜೆಯ ಚಿಕಿತ್ಸೆ ಮಂಗಳೂರಿನ ಜನರಿಗೆ ಯುನಿಟಿ ಆಸ್ಪತ್ರೆಯಲ್ಲಿ ದೊರೆಯಲಿದೆ.

ಹೃದಯ, ನರ ಹಾಗೂ ಇತರ ರೇಡಿಯಾಲಜಿ ಚಿಕಿತ್ಸೆಗಳಿಗೆ ಈ ಹೊಸ ಕ್ಯಾಥ್‌ಲ್ಯಾಬ್ ಸಹಕಾರಿಯಾಗಲಿದೆ.

ಕ್ಯಾಥ್‌ಲ್ಯಾಬ್ ವೈಶಿಷ್ಟ್ಯಗಳು:-
ಸುಧಾರಿತ ಚಿತ್ರಣ ಮತ್ತು ನಿಖರತೆ : ಹೃದಯ ಹಾಗೂ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಉತ್ತಮ ಗುಣಮಟ್ಟದ ಚಿತ್ರಣ ಒದಗಿಸುವುದರಿಂದ ವೈದ್ಯರಿಗೆ ಹೆಚ್ಚು ನಿಖರವಾದ ಚಿಕಿತ್ಸೆ ನೀಡಲು ಈ ಕ್ಯಾಥ್‌ಲ್ಯಾಬ್ ನೆರವಾಗಲಿದೆ.
ರೇಡಿಯೇಷನ್ ಸೇಫ್ಟಿ: ಸಾಂಪ್ರದಾಯಿಕ ಕ್ಯಾಥ್‌ಲ್ಯಾಬ್‌ಗಳಿಗೆ ಹೋಲಿಸಿದರೆ ಇದು ರೋಗಿ ಮತ್ತು ವೈದ್ಯರಿಗೆ ಹೆಚ್ಚು ಸುರಕ್ಷಿತವಾಗಿದೆ.
ಡೈನಾಮಿಕ್ ಕೊರೊನರಿ ರೋಡ್‌ಮ್ಯಾಪ್(DCR): ಸ್ಟೆಂಟ್ ಅಳವಡಿಸುವ ಕಾರ್ಯವನ್ನು ವೇಗವಾಗಿ ಮತ್ತು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.
ಗ್ಲೋಬಲ್ ಕೊರೊನರಿ ಗೈಡೆನ್ಸ್ ಟೂಲ್ಸ್: ‘ಸ್ಟೆಂಟ್ ಬೂಸ್ಟ್ ಲೈವ್’ ಹಾಗೂ ‘DCR ಲೈವ್ ಗೈಡೆನ್ಸ್’ ಸೌಲಭ್ಯದಿಂದ ಚಿಕಿತ್ಸೆ ಇನ್ನಷ್ಟು ಸುರಕ್ಷಿತ ಮತ್ತು ಸುಲಭವಾಗುತ್ತದೆ.
ಪ್ಯೂಚರ್ ರೆಡಿ ಇನ್ಪ್ರಾಸ್ಟ್ರಕ್ಚರ್ : ಈ ಮೂಲಕ ರೇಡಿಯಾಲಜಿ, ಹೃದಯ, ಮೆದುಳು ಚಿಕಿತ್ಸೆಗಳನ್ನು ಸುಗಮವಾಗಿ ಮಾಡಬಹುದಾಗಿದೆ.












