ಮಂಗಳೂರು: ಭಾರತೀಯ ಜನತಾ ಪಾರ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಪೌರತ್ವ ತಿದ್ದುಪಡಿ ಕಾಯ್ದೆ – 2019 (CAA) ವಿಭಾಗ ಮಟ್ಟದ ಕಾರ್ಯಗಾರವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನ ಅವರು ಉದ್ಘಾಟಿಸಿದರು.
ಅನಂತರ ಮಾತನಾಡಿದ ಅವರು, ಕೇಂದ್ರ ಸರಕಾರದ, ಪ್ರಧಾನಿ ಅವರ ಮಹತ್ವಾಕಾಂಕ್ಷೆಯ ಹಲವಾರು ಯೋಜನೆಗಳು ತಳ ಮಟ್ಟದ ಜನರಿಗೆ ತಲುಪುತ್ತಿದೆ. ಪೌರತ್ವ ಕಾಯಿದೆಯ ಬಗ್ಗೆ ಕೆಲವರು ಗೊಂದಲ ಉಂಟು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸಿ ಜನತೆಗೆ ಅರಿವು ಮೂಡಿಸಬೇಕಿದೆ ಎಂದರು.
ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಪೌರತ್ವ ಕಾಯಿದೆಯ ಮಹತ್ವದ ಬಗ್ಗೆ ಮಂಗಳೂರಿನ ತಳಮಟ್ಟದ ಜನರಿಗೆ ಅದರ ಅಗತ್ಯತೆ, ಮಹತ್ವವನ್ನು ತಲುಪಿಸುವ ಕೆಲಸ ಈ ಮೂಲಕ ಅಗಬೇಕಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ವಿಭಾಗೀಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೌರತ್ವ ಕಾಯಿದೆಯ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.