ಪತ್ರಕರ್ತರ ೩೫ ನೇ ರಾಜ್ಯ ಸಮ್ಮೇಳನ: ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಹ್ವಾನ

ಧರ್ಮಸ್ಥಳ: ಮಾರ್ಚ್ 7-8 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ಸಂಘದ ನಗರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,  ಗ್ರಾಮಾಂತರ ಕಾರ್ಯದರ್ಶಿ ಭುವನೇಶ್ವರ ಜಿ ಗೇರುಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ನಿಯೋಗದ ಜೊತೆಗೆ ಬೆಳ್ತಂಗಡಿ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಕಾರ್ಯದರ್ಶಿ ಮನೋಹರ ಬಳಂಜ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಜೊತೆ ಕಾರ್ಯದರ್ಶಿ ಗುರುಮೂರ್ತಿ ಶಗ್ರಿತ್ತಾಯ ಕೊಕ್ಕಡ, ಸದಸ್ಯರುಗಳಾದ ಮಂಜುನಾಥ ರೈ, ಬಿ.ಎಸ್ ಕುಲಾಲ್, ಆರ್.ಎನ್ ಪೂವಣಿ, ಧನಕೀರ್ತಿ ಆರಿಗಾ, ಪದ್ಮನಾಭ ಕುಲಾಲ್ ವೇಣೂರು ಮತ್ತು ಜಾರಪ್ಪ ಪೂಜಾರಿ ಬೆಳಾಲು ಉಪಸ್ಥಿತರಿದ್ದರು.
ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಅವರನ್ನೂ ಭೇಟಿ ಮಾಡಿದ ನಿಯೋಗ ಅವರನ್ನೂ ಸಮ್ಮೇಳನಕ್ಕೆ ಆಹ್ವಾನಿಸಿದರು.