ನೆರೆ ಸಂತ್ರಸ್ತರಿಗೆ ಒಡಿಯೂರು ಸಂಸ್ಥಾನದಿಂದ 10 ಲಕ್ಷ ರೂ. ಪರಿಹಾರ

ಮಂಗಳೂರು: ಜಳಪ್ರಳಯದಿಂದಾಗಿ ಉತ್ತರ ‌ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ತತ್ತರಿಸಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ನಾನಾ ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ. ಅದರಂತೆ ದಕ್ಷಿಣ ಕನ್ನಡದ ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನದ ಸ್ವಾಮಿಜಿಗಳು ಸಂಸ್ಥಾನದ ವತಿಯಿಂದ‌ ನೆರೆ ಸಂತ್ರಸ್ತರ ಪುನಶ್ಚೇತನಕ್ಕಾಗಿ 10 ಲಕ್ಷ ರೂ ನೀಡಲಾಗಿದೆ.
ಚೆಕ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು.