ಮಂಗಳೂರು: ಕಾಲೇಜ್ ಬಸ್ ಹಾಗೂ ಆಡು ಸಾಗಾಟದ ಲಾರಿ ಮಧ್ಯೆ ಅಪಘಾತ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಮಿತ್ತೂರಲ್ಲಿ ಶುಕ್ರವಾರ ಸಂಭವಿಸಿದೆ.
ಬಸ್ ಚಾಲಕ ಹಾಗೂ ಶಿಕ್ಷಕನೋರ್ವನಿಗೆ ಗಾಯವಾಗಿದೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಆಡುಗಳು ಬಲಿಯಾಗಿವೆ. ಶಾಲಾ ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಶಾಲಾ ಬಸ್ ನ ಮುಂಭಾಗ ಹಾಗೂ ಲಾರಿ ಜಖಂಗೊಂಡಿದೆ. ಮಂಗಳೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಆಡು ಸಾಗಾಟದ ಲಾರಿಯು ಕುಂಬ್ರದಿಂದ ಬರುತ್ತಿದ್ದ ಕುಂಬ್ರ ಮರ್ಕಝ್ ಶರೀಅತ್ ಕಾಲೇಜಿಗೆ ಸೇರಿದ ಕಾಲೇಜ್ ಬಸ್ ಗೆ ಢಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.