ಮಂಗಳೂರು: ಅಳಪೆ ಉತ್ತರ ವಾರ್ಡ್ ಶಿವನಗರ ಕೋರ್ದಬ್ಬು ದೈವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ.ಡಿ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಕಣ್ಣೂರು ರಾಷ್ಟ್ರೀಯ ಹೆದ್ದಾರಿಯಿಂದ ಪ್ರಾರಂಭಗೊಂಡು ಶಿವನಗರದ ಕೋರ್ದಬ್ಬು ದೈವಸ್ಥಾನವನ್ನು ಸಂಪರ್ಕಿಸುವ ಒಳ ರಸ್ತೆಯನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ 15 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ. ಆ ಮೂಲಕ ಈ ಪರಿಸರದ ಸಾರ್ವಜನಿಕರ ಬಹು ದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಶಿವನಗರವನ್ನು ಸಂಪರ್ಕಿಸುವ ಸದ್ಯ ಇರುವ ರಸ್ತೆಗೆ ಜೋಡಿಸಿ ಅಭಿವೃದ್ಧಿಪಡಿಸಲು ಮತ್ತಷ್ಟು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನವನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಮಂಗಳೂರು ನಗರ ಪಾಲಿಕೆ ಸದಸ್ಯರಾದ ರೂಪಶ್ರೀ ಪೂಜಾರಿ, ದಿವಾಕರ್ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಚಂದ್ರವತಿ ವಿಶ್ವನಾಥ್, ಪ್ರಸಾದ್ ಕಣ್ಣೂರು, ನರೇಶ್ ಸರಿಪಳ್ಳ, ಸಂತೋಷ್ ಹೆಗಡೆ, ಮೋಹನ್ ದಾಸ್ ಶೆಟ್ಟಿ, ಶರಣು ಸರಿಪಳ್ಳ, ಲತಾ ಜಗದೀಶ್ ಶಿವನಗರ, ಗಿರೀಶ್ ನೂಜಿ, ಪ್ರವೀಣ್ ನಿಡ್ಡೇಲ್, ವಿಜಯ ಭಂಡಾರಿ, ಮಾಧವ ಕನ್ನಗುಡ್ಡ, ಚಂದ್ರಹಾಸ ಕುಲಾಲ್, ರೇವತಿ ಕುಲಾಲ್, ಸುಂದರ, ಪ್ರವೀಣ್ ಶಿವನಗರ, ಪ್ರವೀಣ್ ಪೂಜಾರಿ, ಸಂತೋಷ್ ಶಿವನಗರ, ಚಂದ್ರಹಾಸ ಪೂಜಾರಿ, ಶೇಖರ ಪೂಜಾರಿ, ಕಿಶೋರ್ ಶಿವನಗರ, ಸುರೇಶ್ ರಾವ್, ನಯನಾ ರಾವ್, ಶೋಭಾ, ಭಾಸ್ಕರ ಕೋಟ್ಯಾನ್, ಜಯಪ್ರಕಾಶ್, ಸುರೇಶ್ ಆಚಾರ್ಯ, ಸರಸ್ವತಿ. ಪದ್ಮಾವತಿ ಶಿವನಗರ, ಸಿಸಿಲ್ ಕಾರ್ಲೋಸ್, ವಿಜಯ ಪೂಜಾರಿ, ಅನಿತಾ ರಾಜ್, ಕವಿತಾ, ದೇವಕಿ ಸಂತೋಷ್, ನವಿನ ವಾಮನ್, ಪುಷ್ಪ ಶಿವನಗರ, ಜಯರಾಜ್ ಪಡಿಲ್, ಗಂಗಾಧರ್, ಅಶೋಕ್ ಕೊಡಕ್ಕಲ್ ಮುಂತಾದವರು ಉಪಸ್ಥಿತರಿದ್ದರು.