ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಜನ ಜಾಗೃತಿ ಸಮಾವೇಶವು ಯಶಸ್ವಿಯಾಗಿದೆ.
ಕಾರ್ಯಕ್ರಮ ಘೋಷಣೆಯಾಗಿ ಕೇವಲ 6 ದಿನಗಳಲ್ಲಿ ಲಕ್ಷಾಂತರ ಜನರನ್ನು ಒಗ್ಗೂಡಿಸುವುದು ಸುಲಭದ ಮಾತಲ್ಲ. ಆದರೆ ದೇವ ದುರ್ಲಭ ಕಾರ್ಯಕರ್ತರಿದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಇಂದಿನ ಕಾರ್ಯಕ್ರಮದಲ್ಲಿ ತೋರಿಸಿಕೊಟ್ಟಿದ್ದೀರಿ. ಜನ ಸಂಘದ ಕಾಲದಿಂದಲೂ ಭಾರತೀಯ ಜನತಾ ಪಾರ್ಟಿಯ ಯಶಸ್ವಿಗೆ ಶಕ್ತಿಯಾಗಿ ನಿಂತವರು ಕಾರ್ಯಕರ್ತರು.
ಪಕ್ಷ ಸಂಧಿಗ್ದತೆಯಲ್ಲಿದ್ದಾಗ ಸಮಸ್ಯೆಗೆ ತಡೆಗೋಡೆಯಂತೆ ನಿಂತು ಪಕ್ಷದ ಹಿತ ಕಾಯ್ದಿದ್ದೀರಿ. ಪಕ್ಷದ ಸೂಚನೆಯನ್ನು ಕಟಿಬದ್ಧರಾಗಿ ಅನುಷ್ಠಾನಗೊಳಿಸುವ ಕಾರ್ಯಕರ್ತರನ್ನು ಪಡೆದಿರುವುದು ನಮ್ಮ ಪಕ್ಷದ ಸೌಭಾಗ್ಯವೆನ್ನಬೇಕು. ಧ್ವಜ ಕಟ್ಟುವ ಕೈಗಳಿಂದ ಹಿಡಿದು ಎಲ್ಲರೂ ತೆರಳಿದ ಮೇಲೆ ಕಸವನ್ನೂ ಬಿಡದೆ ಹೆಕ್ಕಿ ತಮ್ಮ ಕರ್ತವ್ಯ ಮೆರೆದ ನನ್ನ ಎಲ್ಲಾ ಕಾರ್ಯಕರ್ತ ಬಂಧುಗಳಿಗೂ ಶಿರಬಾಗಿ ವಂದಿಸುತ್ತೇನೆ. ಒಂದಾಗಿ ದುಡಿಯೋಣ, ರಾಷ್ಟ್ರಹಿತಕ್ಕೆ ಕಟಿಬದ್ಧರಾಗೋಣ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.












