ಮಡಿಕೇರಿ: ಮಂಗಳೂರು-ಬೆಂಗಳೂರು ರಾ.ಹೆ 75 ರಲ್ಲಿ ಶಿರಾಡಿ ಘಾಟ್ ಸಮೀಪ ಭೂಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಪರ್ಯಾಯ ಮಾರ್ಗದಲ್ಲೂ ಭೂಕುಸಿತ ಭೀತಿಯ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಭಾನುವಾರದಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿನ ತಡೆಗೋಡೆಯ ಸ್ಲ್ಯಾಬ್ ಗಳು ಹೊರಚಾಚಿದ್ದರಿಂದ ಮಾಣಿ-ಮೈಸೂರು ಮಾರ್ಗದಲ್ಲಿ ರಸ್ತೆ ಸಂಚಾರ ನಿಷೇಧಿಸಿ ಮಡಿಕೇರಿ-ಮೇಕೇರಿ-ಅಪ್ಪಂಗಳ-ತಾಳತ್ತಮನೆ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಈ ಮಾರ್ಗದಲ್ಲೂ ಬಿರುಕು ಉದ್ಭವಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸೋಮವಾರ ರಾತಿಯಿಂದ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈಗ ಮಂಗಳೂರಿಗೆ ತೆರಳುವ ವಾಹನಗಳು ಶಿವಮೊಗ್ಗ-ಹೊನ್ನಾವರ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.