ಮಡಂತ್ಯಾರು: ಕೆಥೋಲಿಕ್ ಮಹಾ ಸಮಾವೇಶ-2020

ಮಂಗಳೂರು: ವಿವಿಧ ಉದ್ದೇಶಗನಿಟ್ಟುಕೊಂಡು, ಪ್ರಸಕ್ತ ವಿದ್ಯಮಾನಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಳ್ತಂಗಡಿ ಮತ್ತು ಧರ್ಮ ಪ್ರಾಂತ್ಯದ ಎಲ್ಲಾ ಕ್ಯಾಥೊಲಿಕ್ ರನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷೆಯಿಂದ ಬೆಳ್ತಂಗಡಿಯ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಇಗರ್ಜಿ ಮೈದಾನದಲ್ಲಿ ” ಕೆಥೋಲಿಕ್ ಮಹಾ ಸಮಾವೇಶ -2020″ ಕಾರ್ಯಕ್ರಮ ನಡೆಯಿತು.
‌ಇದೇ ಮೊದಲ ಬಾರಿಗೆ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್, ಭಾರತೀಯ ಕಥೋಲಿಕ ಯುವ ಸಂಚಲನ ಹಾಗೂ ಕಥೋಲಿಕ ಸ್ತ್ರೀ ಮಂಡಳಿ ವತಿಯಿಂದ ನಡೆದ ಸಮಾವೇಶವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಗಂಧ , ರಕ್ತ ಚಂದ್ರನ ಹಾಗೂ ಬೀಟೆ ಗಿಡ ನೆಡುವ ಮೂಲಕ ಉದ್ಘಾಟಿಸಿದರು.
ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ವರ್ಗೀಸ್ ಮಾತನಾಡಿ, ಕಥೋಲಿಕ ಸಮುದಾಯ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ, ಅದರಂತೆ ಮುಂದೆಯೂ ಎಲ್ಲರೊಡನೆ ಒಂದಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮುಂದಾಗಿ ಅಂತ ಹೇಳಿದ್ದರು.
ರಾಷ್ಟ್ರ ನಿರ್ಮಾಣದಲ್ಲಿ ಕಥೋಲಿಕರ ಪಾತ್ರ, ಯುವ ಜನರ ಜವಾಬ್ದಾರಿ, ಪ್ರಸ್ತುತ ರಾಜಕೀಯದಲ್ಲಿ ಕಥೋಲಿಕರ ಪಾತ್ರ, ಮಾದಕದ್ರವ್ಯಕ್ಕೆ ಬಲಿಯಾಗದಂತೆ ಎಚ್ಚರ, ಸಮುದಾಯದ ಅಸ್ತಿತ್ವ ಕುರಿತು ಜಾಗೃತಿ ಹೀಗೆ ವಿವಿಧ ವಿಷಯಗಳ ಕುರಿತು ಗಣ್ಯರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಡಂತ್ಯಾರು ಪೇಟೆಯಿಂದ ಸಮಾವೇಶದ ಮೈದಾನದ ವರೆಗೆ ಬೃಹತ್ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ 25 ಸಾವಿರಕ್ಕೂ ಅಧಿಕ ಕಥೋಲಿಕ ಸಮುದಾಯವರು ಸೇರಿದ್ದರು.