ಮಂಗಳೂರು: ಲಾಕ್ ಡೌನ್ ಉಲ್ಲಂಘಿಸಿದ ಬರೋಬ್ಬರಿ 100 ವಾಹನಗಳನ್ನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೀಝ್ ಮಾಡಲಾಗಿದೆ.
ಇದರಲ್ಲಿ 88 ದ್ವಿಚಕ್ರ ವಾಹನಗಳು, 4 ಆಟೋಗಳು ಹಾಗೂ 8 ಕಾರುಗಳು ಒಳಗೊಂಡಿವೆ.
ಲಾಕ್ ಡೌನ್ ಮಧ್ಯೆಯೂ ಈ ವಾಹನಗಳು ರಸ್ತೆಗಿಳಿದ್ದವು. ದಿನ ಬಳಕೆ ವಸ್ತುಗಳ ಖರೀದಿಗೆ ವಾಹನಗಳ ನಿಷೇಧಗಳನ್ನು ನಿಷೇಧಿಸಲಾಗಿದೆ.
ನಡೆದುಕೊಂಡೇ ಮನೆ ಸಮೀಪ ಖರೀದಿಗೆ ಬೆಳಿಗ್ಗೆ 7 ರಿಂದ 12 ರವರೆಗೆ ಅವಕಾಶ ನೀಡಲಾಗಿತ್ತು. ಆದೇಶವಿದ್ರೂ ರಸ್ತೆಗಿಳಿದಿದ್ದ ವಾಹನಗಳನ್ನು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷಾ ಆದೇಶದಂತೆ ಸೀಝ್ ಮಾಡಲಾಗಿದೆ.
ಮಂಗಳೂರಲ್ಲಿ ನಾಳೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.