ಮಂಗಳೂರು: ಜಿಲ್ಲೆಯಲ್ಲಿ ಅಗಿರುವಂತಹ ಅತೀವೃಷ್ಟೀ ಬಾಧಿಸಿ ಬಹಳಷ್ಟು ಕುಟುಂಬಗಳು ಸಂಕಷ್ಟದಲ್ಲಿದೆ. ಹಲವಾರು ಮಂದಿ ಮನೆಯನ್ನೆ ಕಳೆದು ಕೊಂಡಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಗಳು ಎಲ್ಲಾ ಸಚಿವರಲ್ಲಿ ತಿಳಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಜಿಲ್ಲಾಡಳಿತ, ಇಲಾಖೆಗಳೊಂದಿಗೆ ಸ್ಪಂಧಿಸಿದ್ದು, ನೆರೆಪೀಡಿತರಿಗೆ ಪರಿಹಾರ ನೀಡಲು ಪೂರ್ಣ ಮನೆಕಳಕೊಂಡವರಿಗೆ 5 ಲಕ್ಷ ರೂ., ಭಾಗಶಃ ಮನೆಕಳಕೊಂಡವರಿಗೆ 1ಲಕ್ಷ ರೂ. ಬಾಡಿಗೆ ಮನೆಗೆ 5 ಸಾವಿರ ಹಾಗೂ ಕೂಡಲೇ ಸ್ಪಂಧನೆಯಾಗಿ ಹತ್ತು ಸಾವಿರ ರೂ.ಗಳನ್ನು ನೀಡಲು ಸರಕಾರ ಒಪ್ಪಿದಂತೆ ಜನರಿಗೆ ಈಗಾಗಲೇ ಪರಿಹಾರ ಕಾರ್ಯ ತಲುಪುತ್ತಿದೆ ಎಂದರು.
ಉಭಯ ಜಿಲ್ಲೆಗಳಲ್ಲಿ ಸುಳ್ಯದ ಶಾಸಕ ಅಂಗಾರ ಮತ್ತು ಬೈಂದೂರು ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಅನ್ನುವ ಬಗ್ಗೆ ಬೇಜರಾಗುವುದು ಸಹಜ. ಅವರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಒತ್ತಡದಿಂದ ಬಾವುಕರಾಗಿ ಮಾತನಾಡಬಹುದು. ಇವರೆಲ್ಲ ಪಕ್ಷದ ನಿಷ್ಠಾವಂತರಾಗಿದ್ದವರೇ ಅವರ ಸಮಸ್ಯೆಯನ್ನು ಹಿರಿಯರು ಸರಿಪಡಿಸುತ್ತಾರೆ ಎಂಬುದಾಗಿ ತಿಳಿಸಿದರು. ಮನೆ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ. ಇದನ್ನು ಕೂಡಾ ವಿಪತ್ತು ಎಂದೇ ಪರಿಗಣಿಸಿ ರಾಜ್ಯ ಸರಕಾರ ಮಳೆ ಸಂತಸ್ತರಿಗೆ ಮನೆ ನಿರ್ಮಿಸಲು ನೀಡುತ್ತಿರುವ 5 ಲಕ್ಷ ರೂ. ವಿಶೇಷ ಪ್ಯಾಕೇಜ್‌ನ್ನು ಇಲ್ಲಿನ ಸಂತ್ರಸ್ತರಿಗೂ ನೀಡಬೇಕು ಎಂದು ಸಚಿವರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.
ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಶಾಸಕ ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ. ಆರ್. ಸೆಲ್ವಮಣಿ, ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಪಿ.ಎಸ್., ಮೆಸ್ಕಾಂ ಎಂಡಿ ಸ್ನೇಹಾಲ್ ಆರ್. ಉಪಸ್ಥಿತರಿದ್ದರು.












