ಮಂಗಳೂರು: ಜನವರಿ 27 ರಂದು 2.45 ಕಿಮೀ ಉದ್ದದ ರನ್ವೇ 06-24 ರ ರಿ-ಕಾರ್ಪೆಟಿಂಗ್ ಕಾಮಗಾರಿಯನ್ನು ಆರಂಭಿಸಿದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮೇ 28 ರಂದು ತನ್ನ ವೇಳಾಪಟ್ಟಿಗಿಂತ ಮುಂಚಿತವಾಗಿ ಕೆಲಸವನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಜೂನ್ 1 ರಿಂದ ಹಳೆಯ ವೇಳಾಪಟ್ಟಿಗನುಗುಣವಾಗಿ ವಿಮಾನ ಸಂಚಾರ ನಡೆಯಲಿದೆ.
ವಿಮಾನ ನಿಲ್ದಾಣದ ರನ್ವೇಗಳನ್ನು ನಿಖರವಾದ, ಅಂತರಾಷ್ಟ್ರೀಯವಾಗಿ ಕಡ್ಡಾಯವಾದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ಆದರೆ ಆಗಾಗ್ಗೆ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಆಗುವ ವಿಮಾನಗಳು ರನ್ ವೇಗಳ ಸವೆತಕ್ಕೆ ಕಾರಣವಾಗುತ್ತವೆ. ಮಳೆ ಮತ್ತು ಸೂರ್ಯನಂತಹ ನೈಸರ್ಗಿಕ ಹವಾಮಾನ ವಿದ್ಯಮಾನಗಳು ರನ್ವೇ ಮೇಲ್ಮೈ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ರನ್ ವೇ ಗಳ ರಿ-ಕಾರ್ಪೆಟಿಂಗ್ ಮಾಡುವುದು ಅವಶ್ಯವಾಗುತ್ತದೆ.
ರಿ-ಕಾರ್ಪೆಂಟಿಗ್ ಮಾ ಡಲಾದ ರನ್ ವೇ ವಾಯುಯಾನ ಸುರಕ್ಷತಾ ನಿಯಂತ್ರಕವು ನಿಗದಿಪಡಿಸಿದ ಅನುಸರಣೆ ಮಾನದಂಡಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಮತ್ತು ಮಾರ್ಚ್ 10 ರಿಂದ ಪ್ರಾರಂಭವಾಗಿ ಕೇವಲ 75 ಕೆಲಸದ ದಿನಗಳಲ್ಲಿ ಪೂರ್ಣಗೊಂಡಿದೆ. ಗಟ್ಟಿಯಾದ ರನ್ವೇಯಲ್ಲಿ ಡಾಂಬರಿನ ಹೊಂದಿಕೊಳ್ಳುವ ಮೇಲ್ಪದರವು ಭಾರತದಲ್ಲಿ ಇದೇ ಮೊದಲೆ ಬಾರಿಗೆ ಪ್ರಯೋಗವಾಗಿದೆ ಎಂದು ಎಂದು ಎಂಐಎ ವಕ್ತಾರ ತಿಳಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 36 ವಿಮಾನಗಳ ಚಲನೆಯನ್ನು ನಿರ್ವಹಿಸುತ್ತದೆ. ಕಾಮಗಾರಿ ಕಾರ್ಯಾಚರಣೆಯ ಸಂದರ್ಭ ವಿಮಾನಯಾನಕ್ಕೆ ತೊಂದರೆಯಾಗದಂತೆ ಪ್ರತಿ ದಿನ ಬೆಳಿಗ್ಗೆ 9.30 ರಿಂದ ಸಂಜೆ 6 ರವರೆಗೆಒಟ್ಟು 8.5 ಗಂಟೆಗಳ NOTAM (ಏರ್ಮೆನ್ಗೆ ಸೂಚನೆ) ಅನ್ನು ಪೂರಕವಾಗಿ ಬಳಸಲಾಗಿದೆ.
75 ದಿನಗಳಲ್ಲಿ, ಯೋಜನೆಯನ್ನು ಪೂರ್ಣಗೊಳಿಸಲು 529 ಗಂಟೆ ತಗಲಿದೆ. ದಿನದ ಉಳಿದ 14.5 ಗಂಟೆಗಳ ಅವಧಿಯಲ್ಲಿ ಸರಾಸರಿ 18 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ರನ್ವೇಯನ್ನು ಪ್ರತಿದಿನ ತೆರೆದಿರಿಸಲಾಗಿತ್ತು. ಈ ಯೋಜನೆಯು ಎಂಭತ್ತು ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು 82 ಕಿಮೀ ರಸ್ತೆ ನಿರ್ಮಾಣಕ್ಕೆ ಸಮಾನವಾದ 81,696 ಟನ್ಗಳಷ್ಟು ಡಾಂಬರನ್ನು ಬಳಸಿದೆ.