ನನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರಕರಣ ದಾಖಲಾಗಿದೆ: ಮೊಯ್ದಿನ್ ಬಾವ

ಮಂಗಳೂರು: ಮಂಗಳೂರಲ್ಲಿ ಮಹಾನಗರಪಾಲಿಕೆ ‌ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆದ ಕಾಂಗ್ರೆಸ್ ಜಟಾಪಟಿ ಕುರಿತು ಮಾಜಿ ಶಾಸಕ ಮೊಯ್ದಿನ್ ಬಾವ ಕೊನೆಗೂ ಪ್ರತಿಕ್ರಿಯೆ ನೀಡಿದ್ದು, ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ‌ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಖಾಸಗಿ ಹೊಟೇಲ್ ಬಳಿ ನಡೆದ ಘಟನೆ ಬಗ್ಗೆ ಬಹಳ ವಿಷಾದವಿದೆ. ಗಲಾಟೆ ವೇಳೆ ಮಾಜಿ ಮಹಿಳಾ ಮೇಯರ್ ಗುಲ್ಜಾರ್ ಬಾನು ಪುತ್ರ ಹಾಗೂ ಡ್ರೈವರ್ ಜತೆಗಿದ್ದರು. ಟಿಕೆಟ್ ವಿಚಾರದಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ನನ್ನ ಮೇಲೆ ಮಾಜಿ‌ ಮಹಿಳಾ ಮೇಯರ್ ಪುತ್ರ ಹಲ್ಲೆ ಮಾಡಿದ್ದಾನೆ ಎಂದರು.
ಇನ್ನು ಟಿಕೆಟ್ ಕೊಡಿಸಲು ನಾನು ಹಣ ಪಡೆದಿದ್ದೆ ಎಂಬ ವಿಚಾರ ಶುದ್ದ ಸುಳ್ಳು. ಯಾರ ಬಳಿಯಿಂದ ನಾನು ಹಣ ಪಡೆದಿಲ್ಲ. ನಾನು ಹಣ ಪಡೆದು ಟಿಕೆಟ್ ಕೊಡುವುದಾಗಿದ್ರೆ ೧ ಕೋಟಿ ಡಿಮ್ಯಾಂಡ್ ನನಗೆ ಇತ್ತು. ಆದರೆ ನಾನು ಹಣ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇನ್ನು ತಗಾದೆ ಎತ್ತಿರುವ ಮಾಜಿ‌ ಮಹಿಳಾ ‌ಮೇಯರ್ ಗೆ ಕಾಂಗ್ರೆಸ್ ಎರಡು ಬಾರಿ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಆ ಮಹಿಳೆಯನ್ನು ಜನರು ತಿರಸ್ಕರಿಸಿದ್ದರು. ನನ್ನ ಮೇಲಿನ ಹಲ್ಲೆ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ನನ್ನ ಬಳಿಯಿಂದ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ಎಂದರು.