ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸುತ್ತೋಲೆಯಿಂದ ವಿನಾಯ್ತಿ ನೀಡಿ:ಡಾ| ಎಂ.ಎನ್‌ ರಾಜೇಂದ್ರ ಕುಮಾರ್

ಮಂಗಳೂರು:ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಜು.30ರಂದು ಕೃಷಿ ಇಲಾಖೆಯ ಮೂಲಕ ರಸಗೊಬ್ಬರ ಮಾರಾಟ ಕೇಂದ್ರ ತೆರೆಯಲು ಪರವಾನಿಗೆಗೆ ಕಡ್ಡಾಯವಾಗಿ ಕೃಷಿ ವಿಜ್ಞಾನದಲ್ಲಿ ಪದವಿ ಅಥವಾ ಡಿಪ್ಲೊಮಾ ಇನ್‌ ಎಇಎಸ್‌ಐ ಪ್ರೋಗ್ರಾಮ್‌ ಅರ್ಹತೆ ಹೊಂದಿರಬೇಕು ಎಂಬ  ಸುತ್ತೋಲೆ ಹೊರಡಿಸಿದ್ದು  ಈ ಸುತ್ತೋಲೆಯಿಂದ ವಿನಾಯಿತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌.  ಅವರು ಕೇಂದ್ರ ಸರಕಾರದ ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅ ಮನವಿ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ರಸಗೊಬ್ಬರ ಮಾರಾಟ ಮಾಡಲು ಸಾಧ್ಯವಿಲ್ಲ.

ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರಾಜ್ಯದ ಪ್ರಾ.ಕೃ.ಪ.ಸ. ಸಂಘಗಳ ಮೂಲಕ ರೈತರಿಗೆ ಆಯಾ ಕಾಲಕ್ಕೆ ಸರಕಾರ ನಿಗದಿಪಡಿಸಿದ ಬೆಲೆಯಲ್ಲಿ ರಸಗೊಬ್ಬರ ನೀಡುತ್ತಿದೆ. ಆದರೆ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರು ಅಥವಾ ಪ್ರಾ.ಕೃ.ಪ.ಸ. ಸಂಘಗಳ ಕಾರ್ಯದರ್ಶಿಗಳು ಕೃಷಿ ವಿಜ್ಞಾನದಲ್ಲಿ ಪದವಿ ಅಥವಾಡಿಪ್ಲೊಮಾ ಇನ್‌ ಎಇಎಸ್‌ಐ ಹೊಂದದಿರುವುದರಿಂದ ಸರಕಾರದ ಸುತ್ತೋಲೆಪ್ರಕಾರ ಪರವಾನಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸುತ್ತೋಲೆ ಹಿಂಪಡೆಯಬೇಕು ಎಂವರು ಮನವಿಯಲ್ಲಿ ತಿಳಿಸಿದರು.

ಮನವಿಗೆ  ಸ್ಪಂದಿಸಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು.