ಮಂಗಳೂರು: ಡೆಂಗ್ಯೂ ಪೀಡಿತ ಪ್ರದೇಶವಾಗಿರುವ ಗುಜ್ಜರಕೆರೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶುಕ್ರವಾರ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಡೆಂಗ್ಯೂ ಕಾಯಿಲೆಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಶ್ರದ್ಧಾಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ನೀಡಿದರು.
ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ವಸಂತ್ ಜೆ. ಪೂಜಾರಿ, ದೀಪಕ್ ಪೈ, ಅನಿಲ್ ಕುಮಾರ್, ಉಷಾ, ಲತಾರಾವ್, ಶಿವಪ್ರಸಾದ್, ಪ್ರವೀಣ್, ನೇಮು ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.