ಮಂಗಳೂರು: ಮಂಗಳೂರಿನಲ್ಲಿ ಡೆಂಗ್ಯೂ, ಪ್ಲೇಗ್ ಮಹಾಮಾರಿಗೆ ಭಾನುವಾರ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ.
ತೊಕ್ಕೊಟ್ಟು ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ(23) ಮೃತಪಟ್ಟ ಯುವಕ.
ಕೆಲ ದಿನಗಳಿಂದ ಡೆಂಗ್ಯು , ಪ್ಲೇಗ್ ನಿಂದ ಬಳಲುತ್ತಿದ್ದ ಹರ್ಷಿತ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಸಾವನ್ನಪ್ಪಿದ್ದಾರೆ.
ಹರ್ಷಿತ್ ಗಟ್ಟಿ ಅವರು ಹರೀಶ್ ಗಟ್ಟಿ-ಮಮತಾ ಗಟ್ಟಿ ದಂಪತಿ ಹಿರಿಯ ಪುತ್ರನಾಗಿದ್ದು, ವೆಲ್ಡರ್ ವೃತ್ತಿ ನಿರ್ವಹಿಸುತ್ತಿದ್ದರು.
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ದಿನಗಳ ಅಂತರದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.