ಮಂಗಳೂರು: ದಸರಾ ಹಬ್ಬ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ, ಪ್ರದೇಶದಿಂದ ವಿಭಿನ್ನತೆ. ಮೈಸೂರು ಭಾಗದ ಆಚರಣೆಗೂ ಮಂಗಳೂರು ಭಾಗದ ಆಚರಣೆಗೂ ವ್ಯತ್ಯಾಸವಿದೆ. ಮೈಸೂರಿನಲ್ಲಿ ದಸರಾ ಗೊಂಬೆಗಳನ್ನು ಮನೆಯಲ್ಲಿಟ್ಟು ಆಚರಿಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಈ ಸಂಸ್ಕೃತಿ ಕಂಡು ಬರೋದಿಲ್ಲ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಕಂಡು ಬರುವ ಸಂಸ್ಕೃತಿಯನ್ನು ಮಂಗಳೂರು ಭಾಗದ ಜನರಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರಿನ ಭಾಗದ ಜನರು ‘ವಿಪ್ರಕೂಟ ನಮ್ಮವರು’ ಸಂಘಟನೆ ಕಟ್ಟಿ ಹಲವು ವರ್ಷಗಳಿಂದ ದಸರಾವನ್ನು ವಿಷೇಶವಾಗಿ ಆಚರಿಸುತ್ತಿದ್ದಾರೆ.
ಮಂಗಳೂರಿನ ಶರಾವು ದೇವಸ್ಥಾನ ಸಭಾಂಗಣದಲಲಿ ೧೦೦೦ ಕ್ಕೂ ಮಿಕ್ಕಿ ಗೊಂಬೆ ಪ್ರದರ್ಶನ ಮಾಡುವ ಮೂಲಕ ತಮ್ಮ ಸಂಪ್ರದಾಯ ಪರಿಚಯಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಗೊಂಬೆಗಳ ನಡುವೆ ಕೃಷ್ಣನನ್ನು ವಾಸುದೇವ ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗುವ ದೃಶ್ಯವನ್ನು ಮನೋಜ್ಞವಾಗಿ ಕಲಾಕೃತಿ ಮೂಲಕ ಚಿತ್ರಿಸಲಾಗಿದೆ. ಒಟ್ಟಿನಲ್ಲಿ ಮೈಸೂರು ಸಂಸ್ಕೃತಿಯನ್ನು ತುಳುನಾಡಿನಲ್ಲಿ ಕಂಡು ಜನ ಎಂಜಾಯ್ ಮಾಡಿದರು.