ಮಂಗಳೂರು: ಕೋವಿಡ್ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದ ಉದ್ಯಮಿ ರಮೇಶ್ ಹಾಗೂ ಗುಣವತಿ ಸುವರ್ಣ ದಂಪತಿಗಳ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.
ಕೋವಿಡ್ ಬಂದಿದೆ ಎಂಬ ಆತಂಕದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಗೂ ಮುನ್ನ ನಡೆಸಿದ ಮೃತದೇಹದ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ.
ಮಂಗಳೂರು ಹೊರವಲಯದ ಕುಳಾಯಿ ರಹಜಾ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ‘ಕೋವಿಡ್ ನಿಂದಾಗಿ ಭಯ ಕಾಡುತ್ತಿದೆ. ಜೀವನವೇ ಬೇಡ ಆಗಿದೆ ಎಂದು ದಂಪತಿ ಉಲ್ಲೇಖಿಸಿದ್ದರು.