ಕೊರೋನ ಭೀತಿ: ಜನಸಂಚಾರ ವಿರಳ, ಬಸ್ಸುಗಳು ಖಾಲಿ ಖಾಲಿ

ಮಂಗಳೂರು: ವೈರಸ್ ಜಗತ್ತನ್ನು ತಲ್ಲಣಗೊಳಿಸಿದ ಮಹಾಮಾರಿ, ಕೊರೊನಾ ವೈರಸ್ ವಿರುದ್ದ ಎಲ್ಲರೂ ಜಾಗೃತರಾಗುತ್ತಿದ್ದಾರೆ. ಇದೇ ಭಯದಿಂದ ಬಸ್ ಗಳಲ್ಲಿ‌ಸಂಚಾರ ಮಾಡುವ ಪ್ರಯಾಣಿಕ ಸಂಖ್ಯೆ ಕೂಡ ಕಡಿಮೆ ಆಗಿದ್ದು, ಜನರು ಮನೆ ಬಿಟ್ಟು ಹೋಗುದಕ್ಕೂ ಭಯ ಪಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡು ಮಂಗಳೂರು ಭಾಗದಿಂದ ದಿನಂಪ್ರತಿ ಸಾವಿರಾರು ಮಂದಿ ಪ್ರಯಾಣ ಬೆಳಸುತ್ತಾರೆ. ಆದ್ರೆ ಕೊರೊನಾದಿಂದಾಗಿ ಜಿಲ್ಲೆಯಿಂದ ಕಾಸರಗೋಡು ಕಡೆಗೆ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡಿದೆ.‌
ಕರ್ನಾಟಕಕ್ಕಿಂತಲೂ ಕೇರಳದಲ್ಲಿ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಜನರನ್ನು ಭಯಭೀತರನ್ನಾಗಿಸಿದೆ. ಹೋಗುವ ಅಲ್ಪ ಪ್ರಮಾಣದ ಪ್ರಯಾಣಿಕರು ಹಾಗೂ ಬಸ್ ಚಾಲಕ ನಿರ್ವಾಹಕರು ಮಾಸ್ಕ್ ಧರಿಸಿ ಪ್ರಯಾಣ ಬೆಳೆಸುತ್ತಿದ್ದಾರೆ.