ಮಂಗಳೂರು: ಮಂಗಳೂರಿನ ಶಾಸಕರಿಗೂ ವಕ್ಕರಿಸಿದ ಕೊರೊನಾ

ಮಂಗಳೂರು: ಕರಾವಳಿಯ ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ.
ಸೋಂಕಿತರ ಸಂಪರ್ಕದಿಂದ ಇವರಿಗೂ ಸೋಂಕು ತಗುಲಿರುವುದು ಶಂಕೆ ವ್ಯಕ್ತವಾಗಿದೆ.
ಸ್ವಯಂ ಪ್ರೇರಿತವಾಗಿ ತಪಾಸಣೆ ನಡೆಸಿದ ವೇಳೆ ಸೋಂಕು ಪತ್ತೆಯಾಗಿದ್ದು, ಮಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಇವರು ಭಾಗಿಯಾಗಿದ್ದಾರೆ. ಸದ್ಯ ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹ ನಡೆಸಲಾಗುತ್ತಿದೆ. ಈ ಬಗ್ಗೆ ಸ್ಚತಃ ಟ್ವೀಟ್ ಮಾಡಿರುವ ಶಾಸಕರು ಜನತೆಗೆ ಜಾಗೃತಿವಹಿಸುವಂತೆ ಮನವಿ ಮಾಡಿದ್ದಾರೆ.