ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ: ನಾಳೆ ಡಿಸ್ಚಾರ್ಜ್

ಮಂಗಳೂರು: ಮಂಗಳೂರಿನಲ್ಲಿ ಓರ್ವ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು ಏ. 6ರಂದು‌ ಡಿಸ್ಚಾರ್ಜ್ ಆಗಲಿದ್ದಾರೆ.
ಭಟ್ಕಳ ಮೂಲದ 22 ವರ್ಷದ  ಯುವಕ  ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದಾನೆ. ಈತ ಮಾ.19ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ.‌ ಎ.2 ಮತ್ತು ಎ.3 ರಂದು ಈತನ ಗಂಟಲು ದ್ರವವನ್ನು ಪುನರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಹೀಗಾಗಿ ನಾಳೆ ಡಿಸ್ಚಾರ್ಜ್ ಗೊಳ್ಳಲಿದ್ದಾರೆ.
ಶನಿವಾರ ಕಳುಹಿಸಲಾಗಿದ್ದ 28 ಗಂಟಲು ದ್ರವದ ಪರೀಕ್ಷೆಯ ವರದಿ ಕೂಡ ನೆಗೆಟಿವ್ ಬಂದಿದೆ. ಈವರೆಗೆ 12 ಜನ ಕೊರೊನಾ ದೃಢಪಟ್ಟಿದ್ದು, ಇದರಲ್ಲಿ ಓರ್ವ ಗುಣಮುಖನಾಗಿದ್ದು ಇನ್ನೂ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.