ಮಂಗಳೂರು: ಮಂಗಳೂರಿನ ಪೊಲೀಸ್-ರೌಡಿ ಪರೇಡ್ ನಲ್ಲಿ ಮಂಗಳೂರು ಕಮಿಷನರ್ ಶಶಿಕುಮಾರ್ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜುಲೈ. 6 ರಂದು ಪೊಲೀಸ್ ಗ್ರೌಂಡ್ ನಲ್ಲಿ ರೌಡಿಗಳಿಗೆ ಮತ್ತು ಗಾಂಜಾ ಕಳಸಾಗಣಿಕೆ ಮಾಡುವವರಿಗೆ ಪರೇಡ್ ನಡೆದಿತ್ತು. ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಕೋರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಅಂಗಿ ಬಿಚ್ಚಿಸಿ, ಮೈ ಮೆಲಿರುವ ಟ್ಯಾಟೂ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತನ್ನಮ್ಮನ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ಅಮನ್ ಉತ್ತರಿಸಿದಾಗ ಮಾಡೋದೆಲ್ಲಾ ಮಾಡಿ ತಾಯಿ ಟ್ಯಾಟೂ ಯಾಕೆ ಹಾಕಿಸಿಕೊಂಡಿದ್ದೀಯಾ, ನೆಟ್ಟಗೆ ಬಾಳಿದರೆ ಸಾಕು, ಹಚ್ಚೆ ಹಾಕಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ.
ಡ್ರಗ್ಸ್ ಸಪ್ಲೈ ಬಗ್ಗೆಯೂ ಅಮನ್ ಅನ್ನು ಪ್ರಶ್ನಿಸಿದ ಕಮಿಷನರ್ ನೀನು ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸ್ತಿದ್ದೀಯಾ? ಸಪ್ಲೈ ನಿಲ್ಲಿಸಿದ್ದೀಯಾ ಎಂದು ಕಿಚಾಯಿಸಿದ್ದಾರೆ. ಪರೇಡ್ ನಲ್ಲಿ ರೌಡಿಗಳ, ಗಾಂಜಾ ಸಾಗಣಿಕೆದಾರರನ್ನು ಸರಿಯಾಗಿಯೆ ರುಬ್ಬಿದ್ದಾರೆ ಮಂಗಳೂರು ಕಮಿಷನರ್ ಶಶಿಕುಮಾರ್. ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಜೊತೆಗಿದ್ದರು.
ಮಾಹಿತಿ: ನಿಖರ ನ್ಯೂಸ್