ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ಮಂಗಳವಾರ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಮಾರು ಒಂದುವರೆ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅನಂತರ ಚಾರ್ಮಾಡಿ ಹಸನಬ್ಬ ತಂಡ ಮರವನ್ನು ತೆರವುವ ಮಾಡುವಲ್ಲಿ ಯಶಸ್ವಿಯಾದರು.
ಮಂಗಳೂರಲ್ಲಿ ಹಾನಿ:
ಮಳೆಯಿಂದಾಗಿ ಮಂಗಳೂರು ನಗರದ ಹಲವೆಡೆಯೂ ಹಾನಿಯುಂಟಾಗಿದೆ. ನಂತೂರು ಬಳಿಯ ಕಂಡೆಟ್ಟು ಶಕ್ತಿನಗರ ರಸ್ತೆಯಲ್ಲಿ ಮರ ಉರುಳಿ ಬಿದ್ದಿದೆ. ಭಾರೀ ಮಳೆಗೆ ಗುಡ್ಡ ಜರಿತ ಹಾಗು ಪ್ರಮುಖ ರಸ್ತೆಗಳಿಗೆ ಹಾನಿ ಸಂಭಬಿಸಿದೆ. ಕೋಟೆಕಣಿ, ಕಂಬಳಪದವು, ವಿಟ್ಲ ಕೊಳ್ನಾಡು, ಸೋಮೇಶ್ವರದಲ್ಲಿ ಗುಡ್ಡ ಕುಸಿತ ಉಂಟಾಗಿದೆ.












