ಬೈಕ್ ಗಳ ಢಿಕ್ಕಿ: ಸವಾರ ಸಾವು

ಸುಳ್ಯ: ಸುಳ್ಯದ ಬೆಳ್ಳಾರೆ- ಸವಣೂರು ರಸ್ತೆಯ ಮುಕ್ಕೂರು ಸನಿಹದ ಕಾಯರ್ಮಾರ್ ಬಳಿ ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.
ಸ್ಕೂಟಿ ಸವಾರ ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಪುರುಷೋತ್ತಮ ಗೌಡ ಅಡ್ಯತಕಂಡ (42) ಅವರು ಮೃತಪಟ್ಟ ದುರ್ದೈವಿ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಆ. 24ರಂದು ರಾತ್ರಿ ಅಪಘಾತ ಸಂಭವಿಸಿತ್ತು. ತಕ್ಷಣ ಆಸ್ಪತ್ರೆ ಗೆ ಕೊಂಡೊಯ್ಯಲಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.‌ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ ಗೌಡ ಅವರು ಮುಕ್ಕೂರು ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಇದರ ಸ್ಥಾಪಕ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು.