ಬೆಳ್ತಂಗಡಿ: ನಾಳೆಯಿಂದ(ನ.22) ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಮಂಗಳೂರು: ದಕ್ಷಿಣ ‌ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೊತ್ಸವ ನಾಳೆಯಿಂದ ಆರಂಭವಾಗಲಿದೆ.
ಮಂಜುನಾಥ ಸ್ವಾಮಿಯ ಸನ್ನಿಧಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತಿದ್ದು, ದೀಪೋತ್ಸವದ ಅಂಗವಾಗಿ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ವಸ್ತು ಪ್ರದರ್ಶನ ನಡೆಯಲಿದೆ. ಅಲ್ಲದೇ ನ. 25, 26ರಂದು ಸಂಜೆ ಸರ್ವಧರ್ಮ ಸಾಹಿತ್ಯ ಸಮ್ಮೇಳನದಲ್ಲಿ‌ ಗಣ್ಯರು ವಿದ್ವಾಂಸರು, ಹಾಗೂ ಕಲಾವಿದರ ಭಾಗವಹಿಸಲಿದ್ದಾರೆ. ಲಕ್ಷದೀಪೊತ್ಸವ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಗಳು ಹಾಗೂ ಪ್ರತಿದಿನ ರಾತ್ರಿ ಮಂಜುನಾಥ ಸ್ವಾಮಿ ಕಟ್ಟೆ ಬಲಿ ಉತ್ಸವ ನಡೆಯಲಿದೆ.
5 ದಿವಸಗಳ ಕಾಲ ನಡೆಯುವ ಈ ಪುಣ್ಯ ಮಹೋತ್ಸವದಲ್ಲಿ ಮೆರವಣಿಗೆ ಮೂಲಕ ರಾಜ ಬೀದಿಯಲ್ಲಿ ಸಾಗಿ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನ ಭಾಗ್ಯ ಸಿಗಲಿದೆ. ಇನ್ನೂ ಈ ಲಕ್ಷದೀಪೊತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಶ್ರೀ ಕ್ಷೇತ್ರಕ್ಕೆ ಅಗಮಿಸಲಿದೆ.