Home Trending ಬಂಟ್ವಾಳದಲ್ಲಿ ‌ಮತ್ತೊಂದು‌ ಕೊರೊನಾ ಪಾಸಿಟಿವ್; ಮೃತಪಟ್ಟ ಮಹಿಳೆಯಿಂದ ವೃದ್ದೆಗೆ ಕೊರೊನ ಹರಡಿರುವ ಸಾಧ್ಯತೆ

ಬಂಟ್ವಾಳದಲ್ಲಿ ‌ಮತ್ತೊಂದು‌ ಕೊರೊನಾ ಪಾಸಿಟಿವ್; ಮೃತಪಟ್ಟ ಮಹಿಳೆಯಿಂದ ವೃದ್ದೆಗೆ ಕೊರೊನ ಹರಡಿರುವ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಬಂಟ್ವಾಳ ಭಾಗದ 67 ವರ್ಷದ ವೃದ್ದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಭಾನುವಾರ ಮೃತಪಟ್ಟ ಬಂಟ್ವಾಳದ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಂಟ್ವಾಳದಲ್ಲಿ ಕೊರೊನಾ ಪರಿಣಾಮದಿಂದ 45 ವರ್ಷದ ಮಹಿಳೆ ಭಾನುವಾರ ಮೃತಪಟ್ಟಿದ್ದು, ಮಹಿಳೆಯ ನೆರೆ ಮನೆಯಲ್ಲಿ ಈ ವೃದ್ದೆ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವೃದ್ದೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ದ‌.ಕ ಜಿಲ್ಲೆಯಲ್ಲಿ ಒಟ್ಟು 16 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 12 ಮಂದಿ ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.