ಮಂಗಳೂರು: ದ.ಕ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಮೊದಲು ಮೃತಪಟ್ಟ ಮಹಿಳೆಯಿಂದ ನೆರೆಮನೆ 67 ವರ್ಷದ ವೃದ್ದೆಗೆ ಸೋಂಕು ತಗುಲಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು, ಇದೀಗ ಅವರ ಮಗಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಎ.21ರಂದು ಪಾಸಿಟಿವ್ ಆಗಿದ್ದ p-409 ವೃದ್ದೆಯ ಸಂಪರ್ಕದಿಂದ 33 ವರ್ಷದ ಮಗಳಿಗೆ ಸೋಂಕು ಹರಡಿದೆ.
ಬಂಟ್ವಾಳದ ಕಸಬಾ ಬಳಿಯ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಸದ್ಯ ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪಾಸಿಟಿವ್ ಆದ ಮಹಿಳೆಗೆ ಎ.19ರಂದೇ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಎ.19ರಂದು ಬಂಟ್ವಾಳದಲ್ಲಿ ಕೊರೋನಾದಿಂದ ಮಹಿಳೆ ಬಲಿಯಾಗಿದ್ದು, ಎ.23 ರಂದು ಮಹಿಳೆಯ ಅತ್ತೆಯೂ ಕೊರೋನಾಗೆ ಬಲಿಯಾಗಿದ್ದರು.