ಮಂಗಳೂರು: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬ ನಡೆದಿದೆ.
ಮೃತಪಟ್ಟವರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್ ಅವರ ಸೊಸೆ ಕಾಂಚನ ನಿವಾಸಿ ಶಾಜಿ ಎಂಬವರ ಪತ್ನಿ ಜೈನೀ ಶಾಜಿ (30) ಮತ್ತು ಜೀಸನ್ (40) ಎಂಬವರು ಎಂದು ಗುರುತಿಸಲಾಗಿದೆ.
ಸರ್ವೀನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಸನ್ ಎಂಬವರು ಧರ್ಮಗುರುದೀಕ್ಷೆ ಪಡೆಯಲು ತರಬೇತಿಯಲ್ಲಿದ್ದರು. ಇವರು ಉಪ್ಪಿನಂಗಡಿ ಕಡೆ ಸಂಚರಿಸುವಾಗ ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಹಾಗೂ ಪುತ್ತೂರು ಸಂಚಾರಿ ಪೋಲೀಸರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ.