ಮಂಗಳೂರು: ಕೊರೊನ ತಡೆಗಟ್ಟುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಇಂದು ಮಂಗಳೂರಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಕೊರೊನಾ ವೈರಸ್ ಬಗ್ಗೆ ಇಡೀ ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿ ಆಗಿದೆ. ಕೇಂದ್ರ ರಾಜ್ಯ ಸರಕಾರ ಸವಾಲಾಗಿ ಸ್ವೀಕರಿಸಿ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಬೇರೆ ದೇಶದಿಂದ ಬರುವವರನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು, 1 ಲಕ್ಷ 85 ಸ್ಕ್ಯಾನಿಂಗ್ ಮಾಡಲಾಗಿದೆ. ಕರ್ನಾಟಕದಲ್ಲಿ 10 ಜನರಲ್ಲಿ ಕಾಣಿಸಿಕೊಂಡಿದ್ದು, ೧ ಮೃತಪಟ್ಟಿದ್ದಾರೆ. ಮೃತರ ಕುಟುಂಬದಲ್ಲಿ ಮತ್ತೆ ಒಬ್ಬರಿಗೆ ಕಾಣಿಸಿಕೊಂಡಿದೆ ಎಂದರು.
ಇನ್ನೂ ಮಾಸ್ಕ್ ಗಳನ್ನು ಮೆಡಿಕಲ್ ಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಅಂತಹ ಮೆಡಿಕಲ್ ವಿರುದ್ಧ ಲೈಸನ್ಸ್ ರದ್ದು ಮಾಡಲಾಗುವುದು ಎಂದರು.
ನಿಯಂತ್ರಣ ಆಗುವವರೆಗೂ ಬಂದ್ ಅನಿವಾರ್ಯ :
ರಾಜ್ಯದಲ್ಲಿ ಈಗಾಗಲೇ ವೈರಸ್ ಭೀತಿಯಿಂದ ಬಂದ್ ಮಾಡಲಾಗಿದ್ದು, ಕೊರೊನಾ ವೈರಸ್ ನಿಯಂತ್ರಣ ಬಾರದೇ ಹೊದ್ರೆ ಮತ್ತೆ ಬಂದ್ ಮುಂದೂಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇನ್ನೂ ಒಂದು ಎರಡು ವಾರ ಬಂದ್ ಮುಂದುವರಿಯುವ ಸಾಧ್ಯತೆ ಇದೆ ಅಂತ ಹೇಳಿದ್ದರು.
ಕೇರಳದ ಕೊರೊನಾ ಪಾಸಿಟಿವ್ ವ್ಯಕ್ತಿ ಮಂಗಳೂರಿನಲ್ಲಿ ಓಡಾಡಿದ ಜಾಗ ಸ್ಕ್ರೀನಿಂಗ್:
ಕಾಸರಗೋಡುವಿನಲ್ಲಿ ಪಾಸಿಟಿವ್ ಕಂಡು ಬಂದ ವ್ಯಕ್ತಿ, ದುಬೈನಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆತನ ಪರಿಚಯಸ್ಥರು, ಸ್ನೇಹಿತರು, ಸಂಬಂಧಿಕರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಆತ ಓಡಾಡಿದ ಜಾಗ ಟ್ಯಾಕ್ಸಿ ಸ್ಕ್ರೀನಿಂಗ್ ಮಾಡಲಾಗುವುದು. ಅಲ್ಲದೇ ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಲ್ಲಿ ಲ್ಯಾಬ್ ತೆರೆಯಲಾಗುವುದು ಎಂದರು.
ವೆನ್ಲಕ್ ಆಸ್ಪತ್ರೆ ಭೇಟಿ ಪರಿಶೀಲನೆ:
ಸಭೆಯ ಬಳಿಕ ಮಂಗಳೂರಿನ ವೆನ್ಲಕ್ ಆಸ್ಪತ್ರೆಗೆ ಭೇಟಿ ನೀಡಿ ವಿಶೇಷ ವಾರ್ಡ್ ಭೇಟಿ, ಪರಿಶೀಲನೆ ನಡೆಸಿದ್ದರು, ಅಲ್ಲದೇ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.
ಧಾರ್ಮಿಕ ಕೇಂದ್ರಗಳಲ್ಲಿ ದರ್ಶನ ಮಾತ್ರ ವಿಶೇಷ ಸೇವೆಗೆ ತಡೆ:
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಇಂದಿನಿಂದ ಎಲ್ಲಾ ಸೇವೆಗಳನ್ನು ರದ್ದುಗೊಳಿಸಲಾಗುವುದು. ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಜಿಲ್ಲಾಡಳಿತದ ನಿರ್ಧಾರವನ್ನು ಅಪರ ಜಿಲ್ಲಾಧಿಕಾರಿ ರೂಪಾ ಹೇಳಿದರು.
ಇಂದಿನಿಂದ ದೇವಸ್ಥಾನ, ದೈವಸ್ಥಾನ ಉತ್ಸವಗಳಲ್ಲಿ ಸಿಬ್ಬಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಇಂದಿನಿಂದ ಎಲ್ಲ ಸೇವೆಗಳನ್ನು ರದ್ದುಪಡಿಸಲಾಗುವುದು ಎಂದವರು ಸಭೆಗೆ ಮಾಹಿತಿ ನೀಡಿದರು.
ಕುಕ್ಕೆಸುಬ್ರಹ್ಮಣ್ಯ ದೇಗುಲದಲ್ಲಿ ಸಹ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠಾಪನೆಯಂತಹ ಸೇವೆಗಳಿಗೆ ಕುಟುಂಬ ಸದಸ್ಯರ ಬದ್ಲು ತಲಾ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು ಎಡಿಸಿ ರೂಪ ಹೇಳಿದ್ದರು.
ನಿಯಮ ಮೀರಿ ಬೀಚ್‌ಗೆ ಎಂಟ್ರಿ ಆದ್ರೆ ದಂಡ ಹಾಕಿ:
ಇನ್ನೂ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್ ಮಂಗಳೂರಲ್ಲಿರೋ ಬೀಚ್ ಪ್ರವೇಶಕ್ಕೂ ನಿರ್ಬಂಧ ಮಾಡಬೇಕು. ಒಂದು ವೇಳೆ ಬೀಚ್ ಗೆ ನಿಯಮ ಮೀರಿ ಎಂಟ್ರಿಯಾದ್ರೆ ದಂಡ ವಿಧಿಸಿ ಎಂದು ಸಭೆಯಲ್ಲಿ ಸೂಚನೆ ನೀಡಿದ್ದರು.