ಮಂಗಳೂರು: ಅಕ್ರಮವಾಗಿ ಚಿನ್ನ ಹಾಗೂ ಸಿಗರೇಟ್ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ದುಬಾಯಿನಿಂದ ಸ್ಫೈಸ್ ಜೆಟ್ ವಿಮಾನದಲ್ಲಿ ಆಗಮಿಸಿದ್ದ. ಬಂಧಿತ ಆರೋಪಿಯಿಂದ 9.65 ಲಕ್ಷ ವೌಲ್ಯದ ಚಿನ್ನ , 6.23 ಲಕ್ಷದ ಬೇರೆ ಬೇರೆ ಬ್ರ್ಯಾಂಡ್ ನ 211 ಪ್ಯಾಕ್ ಗಳಿದ್ದ ಸಿಗರೇಟ್ನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಕ್ಕಳ ಆಟಿಕೆಯಲ್ಲಿ ಅಡಿಗಿಸಿ ಚಿನ್ನ ಹಾಗೂ ಸಿಗರೇಟ್ನ್ನು ಅಡಗಿಸಿಟ್ಟುಕೊಂಡು ಸಾಗಿಸಲು ಯತ್ನಿಸಿದ್ದಾನೆ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.












