udupixpress
Home Trending ಮಂಗಳೂರಲ್ಲಿ ಮತ್ತಿಬ್ಬರಿಗೆ ಕೊರೊನಾ ದೃಢ: ದ.ಕ. ಜಿಲ್ಲೆಯಲ್ಲಿ ಮತ್ತಷ್ಟು ಆತಂಕ

ಮಂಗಳೂರಲ್ಲಿ ಮತ್ತಿಬ್ಬರಿಗೆ ಕೊರೊನಾ ದೃಢ: ದ.ಕ. ಜಿಲ್ಲೆಯಲ್ಲಿ ಮತ್ತಷ್ಟು ಆತಂಕ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು‌ ದೃಡಪಟ್ಟಿದೆ.
ಬಂಟ್ವಾಳದ 69 ವರ್ಷದ ವೃದ್ಧ ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ದನಿಗೆ ಸೋಂಕು ದೃಢಪಟ್ಟಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇದೀಗ ಫಸ್ಟ್ ನ್ಯೂರೋ ಆಸ್ಪತ್ರೆ ಕೊರೋನಾ ಹಾಟ್ ಸ್ಪಾಟ್ ಆಗಿದೆ.
ಎ.19ರಂದು ಕೊರೊನಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿರುವ ಬಂಟ್ವಾಳದ 69 ವರ್ಷದ ವೃದ್ದ, ಮತ್ತೊಬ್ಬರು ಬೋಳೂರು ನಿವಾಸಿ ಗುರುವಾರ ಪಾಸಿಟಿವ್ ಆದ ವೃದ್ಧೆಯ 63 ವರ್ಷದ ಪತಿಗೆ ಪಾಸಿಟಿವ್ ಕಂಡುಬಂದಿದೆ.
ಬೋಳೂರಿನ P-536 ಪತ್ನಿಯ ಸಂಪರ್ಕದಿಂದ ಪತಿಗೆ ಸೋಂಕು ಬಂದಿದ್ದು,
ಬಂಟ್ವಾಳದ P-309 ದ್ವಿತೀಯ ಸಂಪರ್ಕದಿಂದ ವೃದ್ದನಿಗೆ ಸೋಂಕು ತಗುಲಿದೆ.
error: Content is protected !!